Site icon PowerTV

ಇಂದು ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ

ಬೆಂಗಳೂರು: ಮಹಾಘಟಬಂಧನ್​​ ಸಭೆ ಬೆನ್ನಲ್ಲೇ ಇಂದು ಕಾಂಗ್ರೆಸ್​​ ಶಾಸಕಾಂಗ ಪಕ್ಷದ ಸಭೆಯನ್ನು ಖಾಸಗಿ ಹೋಟೆಲ್​ ನಲ್ಲಿ ಹಮ್ಮಿಕೊಳ್ಳಲಾಗಿದೆ.​​​

ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ನಟ ಸಂಜಯ್ ದತ್ ಭೇಟಿ

ರಾಜ್ಯ ರಾಜಕಾರಣದ ಕುರಿತು ಪಕ್ಷದ ವರಿಷ್ಟರಾದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ  ಮಲ್ಲಿಕಾರ್ಜುನ್​ ಖರ್ಗೆ ನೇತೃತ್ವದಲ್ಲಿ ಇಂದು ಸಂಜೆ 7 ಗಂಟೆಗೆ ಮಹಾಘಟಬಂದ್ ಸಭೆ ಬಳಿಕ  ಶಾಸಕಾಂಗ ಪಕ್ಷದ ನಾಯಕರ ಸಭೆ ನಡೆಯಲಿದೆ.

ವಿಧಾನಸಭೆಯಲ್ಲಿ ಚರ್ಚೆಗೆ ಗ್ರಾಸವಾಗಿರವ ವರ್ಗಾವಣೆ, ಅನುದಾನ ವಿಚಾರದಲ್ಲಿನ ಜಟಾಪಟಿ ಕುರಿತು ಶಾಸಕಾಂಕ ಪಕ್ಷದ ಸಭೆಯಲ್ಲಿ ಗಂಭೀರ ಚರ್ಚೆಯಾಗುವ ಸಾಧ್ಯತೆ ಇದೆ, ಸಿಎಂ, ಡಿಸಿಎಂ ನಡುವಿನ ಭಿನ್ನಾಭಿಪ್ರಾಯ ಸೇರಿದಂತೆ ಸಿಎಂ ಅಧಿಕಾರ ಹಂಚಿಕೆ ವಿಚಾರದಲ್ಲಿ ತೀವ್ರ ಗುದ್ದಾಟ ಶಮನಕ್ಕೆ ತರುವ ಪ್ರಯತ್ನ ನಡೆಯಲಿದೆ, ಇದೇ ವೇಳೆ ಸಿಎಂ, ಡಿಸಿಎಂ ಆಪ್ತರಿಗೆ ಯಾವುದೇ ಗೊಂದಲಕ್ಕೆ ಕಾರಣರಾಗದಂತೆ ನಡೆದುಕೊಳ್ಳುವಂತೆ ಎಚ್ಚರಿಕೆ ಕೈ ನಾಯಕರು ನೀಡಲಿದ್ದಾರೆ.

Exit mobile version