Site icon PowerTV

ವೀಲಿಂಗ್​ ಮಾಡಿ ಜನರಿಗೆ ತೊಂದರೆ ನೀಡುತ್ತಿದ್ದವರ ಬಂಧನ!

ಮೈಸೂರು: ನಗರದ ಹಲವೆಡೆ  ಬೈಕ್ ವೀಲಿಂಗ್ ಮಾಡುವ ಮೂಲಕ ಜನರಿಗೆ ತಲೆನೋವಾಗಿದ್ದ ಕಿಡಿಗೇಡಿಗಳನ್ನು ಮೈಸೂರು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಸೀಮೆಎಣ್ಣೆ ಸುರಿದು ಹೆತ್ತ ಮಗನನ್ನೇ ಕೊಂದ ತಾಯಿ!

ನಗರದ ನರಸಿಂಹರಾಜ ಸಂಚಾರಿ ಠಾಣೆ ವ್ಯಾಪ್ತಿಯ ಇಬ್ಬರು, ಸಿದ್ದಾರ್ಥ ಠಾಣೆಯ ವ್ಯಾಪ್ತಿಯಲ್ಲಿ ಓರ್ವನ ಪತ್ತೆ ಮಾಡಿದ ಪೊಲೀಸರು  ವಶಕ್ಕೆ ಪಡೆದಿದ್ದಾರೆ, ಇತ್ತೀಚೆಗೆ ನಗರದ ಹೊರ ವಲಯದ ರಿಂಗ್ ರಸ್ತೆ ಸೇರಿದಂತೆ ಹಲವೆಡೆ ಬೈಕ್ ವೀಲಿಂಗ್ ಹಾವಳಿ ಹೆಚ್ಚಿದ್ದು ವಾಹನ ಸವಾರರಿಗೆ ಅಪಾಯ ಉಂಟು ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದದ್ದವು.

ಈ ಹಿನ್ನೆಲೆ ಕಾರ್ಯಚರಣೆಗೆ ಇಳಿದ ಸಂಚಾರಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿತರಿಂದ ವೀಲಿಂಗ್​ಗಾಗಿ ಬಳಸುತ್ತಿದ್ದ ಮೂರು ಬೈಕ್ ವಶಕ್ಕೆ ಪಡೆದ ವಿಚಾರಣೆ ನಡೆಸುತ್ತದ್ದಾರೆ.

Exit mobile version