Site icon PowerTV

ರಸ್ತೆ ಅಪಘಾತದಲ್ಲಿ ವ್ಯಕ್ತಿ ಸಾವು, ಕೊಲೆ ಶಂಕೆ

ರಾಮನಗರ : ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಮಾದೇಶ್ (40) ಮೃತ ವ್ಯಕ್ತಿ. ಈತ ಅರಳಿಮರದೊಡ್ಡಿ ಗ್ರಾಮದ‌ ನಿವಾಸಿ. ನಿನ್ನೆ ಸಂಜೆ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಅರಳಿಮರದೊಡ್ಡಿ ಗ್ರಾಮದಲ್ಲಿ ಅಪಘಾತ ಸಂಭವಿಸಿತ್ತು.

ಇದನ್ನು ಓದಿ : ವಂದೇ ಭಾರತ್ ರೈಲಿನ ಕೋಚ್‌ನಲ್ಲಿ ಬೆಂಕಿ, ತಪ್ಪಿದ ಅನಾಹುತ

ಅಪಘಾತ ಹಿನ್ನಲೆ ಕೂಡಲೇ ಮಾದೇಶ್ ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮಾದೇಶ ಮೃತಪಟ್ಟಿದ್ದಾರೆ. ಆದರೆ, ಕುಟುಂಬಸ್ಥರು ಕೊಲೆ ಆರೋಪ ಮಾಡುತ್ತಿದ್ದಾರೆ.

ವೈಯಕ್ತಿಕ ದ್ವೇಷದ ಹಿನ್ನಲೆ ಅಪಘಾತದ ನೆಪದಲ್ಲಿ ಸಂಭಂದಿಕರೇ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಸೂಕ್ತ ತನಿಖೆ ನಡೆಸುವಂತೆ ಮೃತದೇಹ ಇಟ್ಟುಕೊಂಡು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಈ ಸಂಬಂಧ ಕೋಡಿಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version