Site icon PowerTV

ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಸಿಗ್ತಿಲ್ಲ ಮುಕ್ತಿ!: ಗೊಂದಲಗಳಿಗೆ ಪರಿಹಾರ ಇಲ್ಲಿದೆ

ಬೆಂಗಳೂರು : ಗೃಹಜ್ಯೋತಿ ಯೋಜನೆಗೆ ರಾಜ್ಯದ ಅರ್ಧದಷ್ಟು ಜನ ಇನ್ನೂ ನೋಂದಣಿ ಮಾಡಿಲ್ಲ ಏಕೆ? ಈ ತಿಂಗಳ 25ರೊಳಗೆ ಅರ್ಜಿ ಸಲ್ಲಿಸದಿದ್ದರೆ‌ ಏನಾಗುತ್ತೆ?

ಇದನ್ನೂ ಓದಿ: ಮಹಾಘಟಬಂಧನ್ ಸಭೆ: ವಾಹನ ಸಂಚಾರದಲ್ಲಿ ಬದಲಾವಣೆ

ಈ ತಿಂಗಳ ಉಚಿತ ವಿದ್ಯುತ್ ಲಾಭ‌ ಪಡೆಯಲು ಅರ್ಜಿ ಸಲ್ಲಿಕೆಗೆ ಜುಲೈ 25 ಕೊನೆಯ ದಿನವಾಗಿದೆ, 25 ನಂತರ ಅರ್ಜಿ ಸಲ್ಲಿಕೆಯಾದರೇ ಈ ತಿಂಗಳ ಫ್ರೀ ಕರೆಂಟ್ ಸಿಗುವುದಿಲ್ಲ,

ಗೃಹಜ್ಯೋತಿ ಯೋಜನೆಗೆ ಇದುವರೆಗೂ 1.10 ಕೋಟಿ ಜನರಿಂದ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ ಸಲ್ಲಿಕೆಗೆ ಆರಂಭದಲ್ಲಿ ಉತ್ಸಾಹ ಬರುಬರುತ್ತಾ ಕಡಿಮೆಯಾಗುತ್ತಿದೆ, ಅರ್ಧಕ್ಕಿಂತ ಹೆಚ್ಚು ಜನ ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಸಿಲ್ಲ.

ಅರ್ಜಿ ಸಲ್ಲಿಕೆ ವಿಳಂಬಕ್ಕೆ ಪ್ರಮುಖವಾಗಿ‌ ತಾಂತ್ರಿಕ ತೊಂದರೆಗಳು ಕಾರಣ ಎನ್ನಲಾಗುತ್ತಿದೆ ಇದರಿಂದಾಗಿ ಎಸ್ಕಾಂಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಗೃಹಜ್ಯೋತಿಗೆ ತಾಂತ್ರಿಕ ತೊಂದರೆಗಳೇನು?

  1. ಆರ್.ಆರ್ ನಂಬರ್​ ನಲ್ಲಿರುವ ಹೆಸರು, ಆಧಾರ್ ಹೆಸರು ಹೋಲಿಕೆಯಾಗುತ್ತಿಲ್ಲ.
  2. ಶೇಕಡಾ 25ರಷ್ಟು ವಿದ್ಯುತ್ ಮೀಟರ್ ಪೂರ್ವಿಕರ ಹೆಸರಲ್ಲಿರುವುದು.
  3. ಇದರಲ್ಲಿ ಸಾವನ್ನಪ್ಪಿದವರ ಹೆಸರಿನ ಸಂಖ್ಯೆಯೇ ಇರೋದು ಹೆಚ್ಚು.
  4. ಮೀಟರ್ ಹೆಸರು ಬದಲಾಯಿಸಲು ಅರ್ಜಿ ಸಂಖ್ಯೆಯಲ್ಲಿ ಬರೀ ಹೆಚ್ಚಳ.
  5. ಆಧಾರ್ ಗೆ ನೀಡಿರುವ ಮೊಬೈಲ್ ಸಂಖ್ಯೆ ಅಲಭ್ಯ.
  6. ಬಹುತೇಕ ಜನರು ಮಾಲೀಕರು ಅಂತಲೇ ಅರ್ಜಿ ಸಲ್ಲಿಕೆಗೆ ಕಾಯ್ತಿದ್ದಾರೆ.
  7. ಎಸ್ಕಾಂಗಳಿಗೆ ಕೊಡಲೇ ಹೆಸರು ಬದಲಾವಣೆಗೆ ಅಸಾಧ್ಯ.
  8. ಉಚಿತ ವಿದ್ಯುತ್ ಪಡೆಯಲು ಹೋಗಿ ಮನೆ ಮಾಲೀಕತ್ವದ ಬಗ್ಗೆ ಅನುಮಾನ ಬರಬಾರದು ಅಂತ ಆತಂಕ.
  9. ಕೆಲವರು 200 ಯೂನಿಟ್ ಗಿಂತ ಹೆಚ್ಚು ಬಳಕೆ ಮಾಡುವವರು ಇದ್ದಾರೆ.
  10. ಸರ್ಕಾರಿ‌ ಅಧಿಕಾರಿಗಳು ಹಾಗೂ ಶ್ರೀಮಂತರು ಅರ್ಜಿ ಸಲ್ಲಿಸಲ್ಲ.
  11. 4೦ ಯೂನಿಟ್ ಒಳಗೆ ಬಳಸುವ ಅತಿ ಕಡು ಬಡವರಿಗೆ ಈಗಾಗಲೇ ಸರ್ಕಾರದ ಉಚಿತ ಕರೆಂಟ್ ನೀಡಲಾಗಿದೆ.

ಪರಿಹಾರವೇನು?

  1. ಸದ್ಯಕ್ಕೆ ಮನೆ‌ ಮಾಲೀಕರೂ ಅಂತನೇ ಅರ್ಜಿ‌ ಸಲ್ಲಿಸುವ ಅವಶ್ಯಕತೆಯಿಲ್ಲ.
  2. ಮನೆ ಮಾಲೀಕರು ಲಾಭ ಪಡೆಯಲು ಅರ್ಜಿ ಸಲ್ಲಿಕೆ ವೇಳೆ ಇತರೆ ಆಯ್ಕೆ ಬಳಸಿಕೊಳ್ಳಬಹುದು.
  3. ತಾತ್ಕಲಿಕವಾಗಿ ಬಾಡಿಗೆದಾರರು ಹಾಗೂ‌ ಸಂಬಂಧಿಗಳು ಅಂತ ಅರ್ಜಿ ಸಲ್ಲಿಸಬಹುದು.
  4. ಮುಂದಿನ ದಿನದಲ್ಲಿ ಆರ್.ಆರ್. ನಂಬರ್ ಬದಲಾವಣೆ ನಂತರ‌ ಮಾಲೀಕ ಅಂತ   ಬದಲಾಯಿಸಬಹುದು.
  5. ಬಾಡಿಗೆದಾರರು ಆಧಾರ್ ಲಿಂಕ್ ಆಗದಿದ್ದರೆ ಮನೆಯ ಇತರ ಸದಸ್ಯರ ಹೆಸರಿನ ಮೂಲಕವೂ ಅರ್ಜಿ ಸಲ್ಲಿಸಬಹುದು.
Exit mobile version