Site icon PowerTV

ಬೊಮ್ಮಾಯಿಗೆ ಬಿಗ್ ಆಫರ್ ಕೊಟ್ಟ ಸಚಿವ ಎಂ.ಬಿ ಪಾಟೀಲ್

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವ ಎಂ.ಬಿ ಪಾಟೀಲ್ ಬಿಗ್ ಆಫರ್ ಒಂದನ್ನು ಕೊಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಬೊಮ್ಮಾಯಿಯವರು ಕಾಂಗ್ರೆಸ್ ಸೇರುವ ಬಗ್ಗೆ ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ಈ ಹಿಂದಿನಂತೆ ಹಾಗೂ ಹಿರಿಯ ಬೊಮ್ಮಾಯಿಯವರಂತೆ ಜಾತ್ಯಾತೀತ ಸಿದ್ಧಾಂತಕ್ಕೆ ಮರಳಬೇಕು. ಬೊಮ್ಮಾಯಿ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ಪರಿಗಣಿಸಬಹುದು ಎಂದು ಪರೋಕ್ಷವಾಗಿ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ.

ಇದನ್ನೂ ಓದಿ : ನಾನು ವಿಪಕ್ಷ ಸ್ಥಾನಕ್ಕೆ ಟವೆಲ್ ಹಾಕಿದ್ದೇನಂತೆ : ಹೆಚ್.ಡಿ ಕುಮಾರಸ್ವಾಮಿ

ಬಿಎಸ್​ವೈ ರೀತಿ ಬೊಮ್ಮಾಯಿ ಮೂಲೆಗುಂಪು

ಮುಂದುವರಿದು, ಶೀಘ್ರದಲ್ಲೇ ವಿಪಕ್ಷ ನಾಯಕರಾಗಲಿರುವ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಅಭಿನಂದನೆಗಳು. ಅಂತಿಮವಾಗಿ ಬಿಜೆಪಿಯು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮೂಲೆಗುಂಪು ಮಾಡಲು ನಿರ್ಧರಿಸಿದಂತಿದೆ ಎಂದು ಕುಟುಕಿದ್ದಾರೆ.

ಬೊಮ್ಮಾಯಿಯವರಿಗೂ ಸಹ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರಿಗೆ ಬಂದಂತಹ ಪರಿಸ್ಥಿತಿಯೇ ಬರಲಿದೆ. ಬಿಜೆಪಿ ಎಂಬುದು ಕುಸಿಯುತ್ತಿರುವ ಕಾರ್ಡ್ ಗಳ ಮನೆಯಾಗಿದೆ. ಹೀಗಾಗಿ, ಬೊಮ್ಮಾಯಿ ಅವರು ಕಾಂಗ್ರೆಸ್​ನತ್ತ ಮುಖಮಾಡಿದರೆ ಒಳ್ಳೆಯದು ಎಂದು ಹೇಳಿದ್ದಾರೆ.

Exit mobile version