Site icon PowerTV

ಛತ್ರಪತಿ ಶಿವಾಜಿ ಭಾವಚಿತ್ರ ಹೊಂದಿರುವ ನಾಣ್ಯಗಳು ಪತ್ತೆ

ಚಿತ್ರದುರ್ಗ : ಛತ್ರಪತಿ ಶಿವಾಜಿ ಭಾವಚಿತ್ರ ಹೊಂದಿರುವ ಹಳೆ ಕಾಲದ ನಾಣ್ಯಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಪತ್ತೆಯಾಗಿದೆ.

ಮೊಳಕಾಲ್ಮೂರು ತಾಲೂಕಿನ ಬೈರಾಪುರದಲ್ಲಿ ಕುರಿಗಾಹಿಗಳಿಗೆ ಹಳೆ ಕಾಲದ ನಾಣ್ಯಗಳು ಸಿಕ್ಕಿದೆ. ಹದಿನೈದು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಸೇತುವೆ ಬಳಿಯಲ್ಲಿ ನಾಣ್ಯಗಳು ಪತ್ತೆಯಾಗಿದೆ.

ತಾಮ್ರದ ಮಾದರಿಯ 50ಕ್ಕೂ ಹೆಚ್ಚು ಹಳೆ ಕಾಲದ ನಾಣ್ಯಗಳು ಪತ್ತೆ ಆಗಿವೆ. ಸೇತುವೆ ಕೆಳಭಾಗದ ಮಣ್ಣನ್ನು ಕುರಿಗಾಹಿಗಳು ಅಗೆದಾಗ ನಾಣ್ಯಗಳು ಪತ್ತೆ ಆಗಿವೆ. ನಾಣ್ಯಗಳನ್ನು ಕಂಡು ಗ್ರಾಮಸ್ಥರು ಆಶ್ಚರ್ಯವಾಗಿದ್ದಾರೆ.

ಇದನ್ನು ಓದಿ : ಪಿಹೆಚ್​ಡಿ ಪರೀಕ್ಷೆಯಲ್ಲಿ ಅಕ್ರಮ: ಬೆಂಗಳೂರು ವಿವಿ ಮುಂಭಾಗ ಪ್ರತಿಭಟನೆಗೆ ತೀರ್ಮಾನ

ಬೈರಾಪುರದ ಸೇತುವೆ ನಿರ್ಮಾಣಕ್ಕೆಂದು ಅರಣ್ಯ ಭಾಗದಿಂದ ಮಣ್ಣನ್ನು ತಂದು ಸೇತುವೆ ನಿರ್ಮಾಣವನ್ನು ಮಾಡಲಾಗಿತ್ತು. ಮಣ್ಣಿನ ಜೊತೆಯಲ್ಲಿ ಬಂದಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ. ಸೇತುವೆ ಬಳಿ ಸಿಕ್ಕಿರುವ ಕೆಲ ನಾಣ್ಯಗಳ ಮೇಲೆ ಛತ್ರಪತಿ ಶಿವಾಜಿಯ ಚಿತ್ರವೇ ಹೆಚ್ಚಾಗಿ ಕಂಡುಬಂದಿದೆ. ಕೆಲ ನಾಣ್ಯಗಳ ಹಿಂಬದಿಗಳಲ್ಲಿ ಕತ್ತಿ ಮತ್ತು ಗುರಾಣಿಗಳ ಚಿತ್ರವಿದ್ದು, ಇವೆಲ್ಲ 1674 ರ ಹಳೆಯ ಕಾಲದ ನಾಣ್ಯಗಳು ಎಂದು ನಮೂದು ಮಾಡಲಾಗಿದೆ.

ಸೇತುವೆ ಬಳಿ ಸಿಕ್ಕಿರುವ ಹಳೆ ಕಾಲದ ನಾಣ್ಯಗಳನ್ನು ಗ್ರಾಮಸ್ಥರು ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

ಅಧಿಕಾರಿಗಳು ಹಾಗೂ ಸಂಶೋಧಕರು ಬಂದು ಪರಿಶೀಲನೆಯನ್ನು ನೆಡೆಸಬೇಕೆಂದು ಬೈರಾಪುರ ಗ್ರಾಮದ ಚಿತ್ತಯ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

Exit mobile version