Site icon PowerTV

ಕುಡಿದ ಮತ್ತಿನಲ್ಲಿ ಮಾವನನ್ನೇ ಕೊಂದ ಅಳಿಯ

ಹಾವೇರಿ : ಕುಡಿದ ಮತ್ತಿನಲ್ಲಿ ಆರಂಭವಾದ ಅಳಿಯ ಹಾಗೂ ಮಾವನ ಮಧ್ಯದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಆಡೂರು ಗ್ರಾಮದಲ್ಲಿ ಘಟನೆ ನಡೆದಿದೆ. ಮೈಲಾರಪ್ಪ ಮೃತಪಟ್ಟ ವ್ಯಕ್ತಿ. ಅಳಿಯ ರಮೇಶ್ ನನ್ನು ಆಡೂರು ಪೋಲಿಸರು ಬಂಧಿಸಿದ್ದಾರೆ.

ಆರೋಪಿ ರಮೇಶ್ ಕುಡಿದ ಮತ್ತಿನಲ್ಲಿ ಮಾವನೊಂದಿಗೆ ಜಗಳವಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ ಅಳಿಯ ಮತ್ತು ಮಾವ ಇಬ್ಬರೂ ಬಡಿದಾಡಿಕೊಂಡಿದ್ದಾರೆ. ಈ ವೇಳೆ ಅಳಿಯ ರಮೇಶ್ ಮಾವನನ್ನು ಗೊಡೆಗೆ ಹೊಡೆದಿದ್ದಾನೆ.

ಇದನ್ನೂ ಓದಿ : ಮಗಳನ್ನು ಪ್ರೀತಿಸುತ್ತಿದ್ದ ಯುವಕನಿಗೆ ಚಾಕುವಿನಿಂದ ಇರಿದ ತಂದೆ

ಗೊಡೆಗೆ ತಲೆಯನ್ನು ಚಚ್ಚಿದಾಗ ಮಾವ ಮೈಲಾರಪ್ಪ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಆಡೂರು ಪೋಲಿಸರು ಭೇಟಿ ನೀಡಿ , ಪರಿಶೀಲನೆ ನಡೆಸಿದ್ದಾರೆ. ಕೆಲವು ದಿನಗಳಿಂದ ಇಬ್ಬರ ನಡುವೆ ಕಲಹ ನಡೆಯುತ್ತಿತ್ತು. ಇದೇ ಮೈಲಾರಪ್ಪ ಸಾವಿಗೆ ಕಾರಣ ಎನ್ನಲಾಗಿದೆ. ಈ ಸಂಬಂಧ ಆಡೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version