Site icon PowerTV

ಮೋದಿ ವಿರುದ್ಧ ವಿಪಕ್ಷಗಳಿಗೆ ಪ್ರಧಾನಿ ಅಭ್ಯರ್ಥಿಯೇ ಇಲ್ಲ : ಎನ್. ರವಿಕುಮಾರ್

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಿರೋಧ ಪಕ್ಷಗಳಿಗೆ ಪ್ರಧಾನಿ ಅಭ್ಯರ್ಥಿಯೇ ಸಿಕ್ಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಕುಟುಕಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದೇಶದ ಆರ್ಥಿಕತೆ ನಂಬರ್ ಒನ್ ಆಗುತ್ತಿದೆ. ಮೋದಿಯವರು 3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಗೆಲ್ಲೋದ್ರಲ್ಲಿ ಅನುಮಾನ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ವಿರುದ್ಧ ವಿಪಕ್ಷಗಳ ನಾಯಕರ ಸಭೆ ವಿಚಾರ ಕುರಿತು ಮಾತನಾಡಿ, ಪ್ರಧಾನಿ ಮೋದಿಯವರ ವಿರುದ್ಧ ಪ್ರಧಾನಿ ಅಭ್ಯರ್ಥಿ ಯಾರು ಅಂತ ತೀರ್ಮಾನ ಮಾಡುವ ಧೈರ್ಯ ಇದೆಯಾ ಇವರಿಗೆಲ್ಲ? ಮೋದಿಯವರು ಜಗತ್ತಿನ ಧೀಮಂತ ನಾಯಕ. ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ 350ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೆ ಎಂದು ಹೇಳಿದರು.

ಇದನ್ನೂ ಓದಿ : ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಸುಮಲತಾ ಶಾಕಿಂಗ್ ಹೇಳಿಕೆ

ಕಾಂಗ್ರೆಸ್ ಅಧಿಕಾರಕ್ಕೇರೋದು ಹಗಲುಗನಸು

ರಾಜ್ಯದಲ್ಲಿ ಎಟಿಎಂ ಸರ್ಕಾರ ಅಧಿಕಾರದಲ್ಲಿದೆ. ಹಾಗಾಗಿ, ಬೆಂಗಳೂರಿನಲ್ಲಿ ಅವ್ರು ಸಭೆ ಮಾಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ದಯನೀಯ ಪರಿಸ್ಥಿತಿಯಲ್ಲಿದೆ. 10ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಒಂದೇ ಒಂದು ರಾಜ್ಯವೂ ಇಲ್ಲ. ಕಾಂಗ್ರೆಸ್ ಜೊತೆ ವಿರೋಧ ಪಕ್ಷಗಳು ಸೇರಿದರೆ ಒಂದೆರಡು ಸ್ಥಾನಗಳನ್ನು ಹೆಚ್ಚಿಸಕೊಳ್ಳಬಹುದು. ಆದರೆ, ಯುಪಿಎ ಅಧಿಕಾರಕ್ಕೆ ಬರುತ್ತದೆ ಎನ್ನುವುದು ಹಗಲುಗನಸು ಎಂದು ಛೇಡಿಸಿದರು.

Exit mobile version