Site icon PowerTV

ಪ್ರೀತಿಸಿದ ತಪ್ಪಿಗೆ ಯುವಕನಿಗೆ ಪೆಟ್ರೋಲ್ ಸುರಿದು ಬೆಂಕಿ!

ಬೆಂಗಳೂರು: ಯುವತಿಯನ್ನು ಪ್ರೀತಿಸಿದ ತಪ್ಪಿಗೆ ಯುವತಿಯ ಸಂಬಂಧಿಕರು ಪ್ರಿಯಕರನಿಗೆ ಪಟ್ರೋಲ್​ ಸುರಿದು ಬೆಂಕಿ ಹಚ್ಚಿದ ಘಟನೆ ಕುಂಬಳಗೂಡು ಠಾಣಾವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ಮಹಿಳೆಗೆ ನಂಬರ್​ ಕೊಟ್ಟು ಕರೆ ಮಾಡುವಂತೆ ಟಾರ್ಚರ್​: ಅಟ್ಟಾಡಿಸಿ ಹೊಡೆದ ಗಂಡ!

ಶಶಾಂಕ್, ಪೆಟ್ರೋಲ್​ ದಾಳಿಗೊಳಗಾದ ಯುವಕ,  ಶೇ.85 ರಷ್ಟು ಸುಟ್ಟ ಗಾಯಗಳಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಯುವತಿ ಸಂಬಂಧಿ ಮನು ಎಂಬುವವರಿಂದ ಶಶಾಂಕ್​ ಮೇಲೆ ಹಲ್ಲೆ, ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಪರಾರಿ.

ಘಟನೆಯಿಂದ ಶಶಾಂಕ್ ಪೋಷಕರ ಆಕ್ರೋಶಗೊಂಡಿದ್ದು ಯುವತಿ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ.

ಘಟನೆಯ ಹಿನ್ನೆಲೆ :

ಕಳೆದ ಸೋಮವಾರ ಯುವತಿ ಮೈಸೂರಿನಿಂದ ಬೆಂಗಳೂರಿನಲ್ಲಿರುವ ಶಶಾಂಕ್ ಮನೆಗೆ ಬಂದಿದ್ದಳು ಇದರಿಂದ ಕೆರಳಿ ಕೆಂಡವಾದ ಯುವತಿ ಪೋಷಕರು, ಶಶಾಂಕ್ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದರು, ಯುವತಿಯ ತಂಟೆಗೆ ಬರದಂತೆ ಶಶಾಂಕ್‌ಗೆ ಎಚ್ಚರಿಕೆ ನೀಡಿದ್ದರು. ಎಚ್ಚರಿಕೆಯ ಬಳಿಕ ಶಶಾಂಕ್​ ಸುಮ್ಮನಾಗಿದ್ದ​​.

ಇದನ್ನೂ ಓದಿ: ಶಿಥಿಲಾವಸ್ಥೆ ತಲುಪಿದ ತಾಲ್ಲೂಕು ಕಚೇರಿ ಕಟ್ಟಡ: ಕಡತಗಳ ರಕ್ಷಣೆಗೆ ಟಾರ್ಪಲ್​ ಮೊರೆ!

​ಬೆಂಗಳೂರಿನ ACS ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡ್ತಿದ್ದ ಶಶಾಂಕ್  ಕಳೆದ ಮೂರ್ನಾಲ್ಕು ದಿನಗಳಿಂದ ಕಾಲೇಜಿಗೆ ಹೋಗುತ್ತಿದ್ದ. ಎಂದಿನಂತೆ ಶಶಾಂಕ್​ ತಂದೆ ರಂಗನಾಥ್​ ತಮ್ಮ ಮಗನನ್ನ ಬಸ್‌ ನಿಲ್ದಾಣಕ್ಕೆ ಬಿಟ್ಟು ಹೊರಟಿದ್ದರು.

ಶಶಾಂಕ್​ ತಂದೆ ಹೋಗಿದ್ದನ್ನು ಗಮನಿಸಿದ ಯುವತಿಯ ಸಂಭಂದಿ ಮನು, ಶಶಾಂಕ್ ಒಬ್ಬನೇ ಇದ್ದದ್ದನ್ನು ಗಮನಿಸಿ ಇನೋವಾ ಕಾರಿನಲ್ಲಿ ಬಂದು ಹೊತ್ತೊಯ್ದಿದ್ದಾನೆ, ಬಳಿಕ ಕೈ, ಕಾಲು ಕಟ್ಟಿಹಾಕಿ ಕಿರುಕುಳ ನೀಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.

ಸದ್ಯ ಶೇ.85 ರಷ್ಟು ತೀವ್ರ ಸುಟ್ಟಗಾಯಗಳಿಂದ  ಆರ್ ಆರ್​ ನಗರ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಇನ್ನೂ ಘಟನೆ ಸಂಬಂಧ ಕುಂಬಳಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Exit mobile version