Site icon PowerTV

ಸುತ್ತೂರು ಮಠಕ್ಕೆ ಸಚಿವ ಈಶ್ವರ್ ಖಂಡ್ರೆ ಭೇಟಿ

ಮೈಸೂರು : ಮಂತ್ರಿಯಾದ ಬಳಿಕ ಈಶ್ವರ್ ಖಂಡ್ರೆ ಅವರು ಮೈಸೂರಿನ ಸುತ್ತೂರು ಮಠಕ್ಕೆ ಮೊದಲ ಬಾರಿ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವನಾದ ಬಳಿಕ ಮಠಕ್ಕೆ ಭೇಟಿ ನೀಡಿದ್ದೇನೆ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದು ಹೇಳಿದರು.

ಮೈಸೂರು ಮತ್ತು ಚಾಮರಾಜನಗರದಲ್ಲಿ ಸಾಕಷ್ಟು ಅರಣ್ಯ ಸಂಪತ್ತನ್ನು ಹಾಗೂ ಹುಲಿ ಸಂರಕ್ಷಣಾ ಘಟಕವನ್ನು ಹೆಚ್ಚಾಗಿ ಹೊಂದಿದ್ದೇವೆ. ಪರಿಸರ ಸಂರಕ್ಷಣೆ ಹಾಗೂ ಪ್ರಾಣಿ, ಪಶುಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ವಿಶೇಷವಾಗಿ ಪ್ರಾಣಿ ಮತ್ತು ಮಾನವ ಸಂಘರ್ಷಗಳನ್ನು ತಡೆಗಟ್ಟುವುದು ತುಂಬಾ ಮುಖ್ಯ ಎಂದು ತಿಳಿಸಿದರು.

ಇದನ್ನು ಓದಿ : ಶಿವಮೊಗ್ಗ ನಗರದ ಸಮಸ್ಯೆ ಪರಿಹಾರಕ್ಕೆ ವಾಟ್ಸಪ್ ಹೆಲ್ಪ್ ಲೈನ್ ಆರಂಭ : ನಂಬರ್ ಏನು?

ಸುಶೀಲಾ ಕುಟುಂಬಕ್ಕೆ 15 ಲಕ್ಷ ಪರಿಹಾರ

ಬಾಲಕಿ ಸುಶೀಲಾ ಮೇಲೆ ಚಿರತೆ ದಾಳಿ ವಿಷಯ ತಿಳಿದು ತುಂಬಾ ಬೇಸರವಾಗಿದೆ. ಅದಕ್ಕೆ ವಿಷಾದವನ್ನು ವ್ಯಕ್ತಪಡಿಸುತ್ತೇವೆ. ಸರ್ಕಾರಕ್ಕೆ ಸೂಚನೆಯನ್ನು ನೀಡಿದ್ದೇನೆ. ದಾಳಿಗೆ ಒಳಗಾದಂತ ಬಾಲಕಿಯ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 15 ಲಕ್ಷ ರೂ. ಪರಿಹಾರವನ್ನು ನೀಡಬೇಕು ಎಂದು ಸೂಚಿಸಿದ್ದೇನೆ ಎಂದರು.

ತಿಂಗಳಿಗೆ 4 ಸಾವಿರ ಮಾಸಾಶನ

ತಿಂಗಳಿಗೆ 4 ಸಾವಿರ ರೂ. ಮಾಸಾಶನ ಬರುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟು ಜಾರಿಗೊಳಿಸಲು ಪ್ರಯತ್ನ ಪಡುತ್ತೇನೆ. ಅದಕ್ಕಾಗಿಯೇ ಇಂದು ಅಧೀವೇಶನ ನಡೆಯುತ್ತಿದ್ದರೂ ಅದನ್ನು ಬಿಟ್ಟು ಇಲ್ಲಿಗೆ ಭೇಟಿ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.

Exit mobile version