Site icon PowerTV

ಭಾರತದ ಆಧ್ಯಾತ್ಮ ಪರಂಪರೆಗೆ ಧಕ್ಕೆ ಆಗಿದೆ : ಬಸವ ಜಯ ಮೃತ್ಯುಂಜಯ ಶ್ರೀ

ಬೆಳಗಾವಿ : ಜೈನ ಮುನಿಗಳ ಹತ್ಯೆಯಿಂದ ಭಾರತದ ಆಧ್ಯಾತ್ಮ ಪರಂಪರೆಗೆ ಧಕ್ಕೆ ಆಗಿದೆ ಎಂದು ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಚಿಕ್ಕೋಡಿಯ ಹಿರೇಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಹಿರೇಕೋಡಿ ಜೈನ ಮುನಿಗಳ ಹತ್ಯೆ ವಿಚಾರ ರಾಜಕೀಯ ತಿರುವು ಪಡೆದಿದ್ದಕ್ಕೆ ಅಸಮಾಧಾನ ಹೊರಹಾಕಿದರು.

ಮುನಿಗಳ ಹತ್ಯೆಯನ್ನು ಒಕ್ಕೊರಲಾಗಿ ಖಂಡಿಸಿ ನ್ಯಾಯ ಕೊಡಿಸುವ ಕೆಲಸ ಎಲ್ಲರೂ ಕೂಡಿ ಮಾಡಬೇಕು. ಯಾವುದೇ ಕಾರಣಕ್ಕೂ ಅದಕ್ಕೆ ಕಪ್ಪುಚುಕ್ಕೆ ತರುವಂತ ಪ್ರಯತ್ನ ಆಗೋದು ಬೇಡ. ನೊಂದಂತ ಮನಸ್ಸುಗಳಿಗೆ ಧೈರ್ಯ ಹೇಳಿ ಮುಂದೆ ಈ ರೀತಿ ಘಟನೆ ಆಗದಂತೆ ಎಲ್ಲರೂ ಸಾಮೂಹಿಕ ಪ್ರಯತ್ನ ಮಾಡಿ ಎಂದರು.

ಇದನ್ನೂ ಓದಿ : ಜೈನ ಮುನಿಗಳ ಹತ್ಯೆ : ಮನಸ್ಸಿಗೆ ತುಂಬಾ ನೋವಾಗಿದೆ ಎಂದ ವೀರೇಂದ್ರ ಹೆಗ್ಗಡೆ

125 ಕೋಟಿ ಜನರ ಕರ್ತವ್ಯ

ಈ ಘಟನೆಯಿಂದ ಇಡೀ ಕರ್ನಾಟಕ ತಲೆ ತಗ್ಗಿಸಿದಂತಾಗಿದೆ. ಭಾರತ ಯಾವತ್ತೂ ಆಧ್ಯಾತ್ಮ ರಕ್ಷಣಾ ಭೂಮಿ ಅಂತ ತೋರಿಸಬೇಕಿದೆ. ಈ ರೀತಿಯ ಘಟ‌ನೆ ದೇಶದಲ್ಲಿ ಹಿಂದೆಂದೂ ಆಗಿಲ್ಲ. ಇಷ್ಟರಮಟ್ಟಿಗೆ ಮನುಷ್ಯನ ಮನಸು ವಿಕಾರಗೊಂಡಿದ್ದು ವಿಚಿತ್ರವಾಗಿದೆ. ಇಂತಹ ವಿಚಾರ ವಿಷಯಾಂತರ ಮಾಡದೇ ನ್ಯಾಯ ಒದಗಿಸುವ ಕೆಲಸ ಆಗಲಿ. ಧರ್ಮಗುರುಗಳಿಗೆ ತೊಂದರೆ ಆಗದ ರೀತಿ ಎಚ್ಚರ ವಹಿಸಬೇಕಿರುವುದು ದೇಶದ 125 ಕೋಟಿ ಜನರ ಕರ್ತವ್ಯ ಎಂದು ಶ್ರೀಗಳು ಹೇಳಿದರು.

Exit mobile version