Site icon PowerTV

ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಗ್ರೀನ್​ ಸಿಗ್ನಲ್! ಹಾಲಿ,ಮಾಜಿ ಶಾಸಕರಿಂದ ಲಾಭಿ ಶುರು

ಬೆಂಗಳೂರು : ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್​ ಸಿಗ್ನಲ್​ ಸಿಕ್ಕಿದ್ದು, ಆಗಸ್ಟ್​ ಮೊದಲವಾರದಲ್ಲಿ ಅಧ್ಯಕ್ಷರ ಆಯ್ಕೆ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಜಾರಿ ಕುರಿತು ಇಂದು ಸಚಿವೆ ಲಕ್ಷ್ಮಿಹೆಬ್ಬಾಳ್ಕರ್​ ಪತ್ರಿಕಾಗೊಷ್ಟಿ

ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕದ ಸುಳಿವು ಸಿಗುತ್ತಿದ್ದಂತೆ ಹಾಲಿ ಮತ್ತು ಮಾಜಿ ಶಾಸಕರ ನಡುವೆ  ಲಾಬಿ ಹೆಚ್ಚಾಗಿದೆ, ಆಗಸ್ಟ್ ಮೊದಲ ವಾರದಲ್ಲಿ ಅಧ್ಯಕ್ಷರ ಆಯ್ಕೆ ನಡೆಸುವ ಸಾಧ್ಯತೆ ಇದ್ದು, ಅಸಮಾಧಾನ ಭುಗಿಲೇಳದಂತೆ ಅಳೆದುತೂಗಿ ಅಧ್ಯಕ್ಷರ ಆಯ್ಕೆಗೆ ಸರ್ಕಾರ ಸಿದ್ದತೆ ಮಾಡಿಕೊಳ್ಳಲಿದೆ.

70:30 ಸೂತ್ರದ ಅನ್ವಯ  ಶೇ.70 ರಷ್ಟು ಕಾರ್ಯಕರ್ತರಿಗೆ, ಶೇ.30 ರಷ್ಟು ಶಾಸಕರಿಗೆ ಸ್ಥಾನ ಮತ್ತು ಹಾಲಿ ಶಾಸಕರ ಜೊತೆಗೆ  ಮಾಜಿ ಶಾಸಕರಿಗು ಸ್ಥಾನಮಾನ ನೀಡಲು ತಯಾರಿ ನಡೆದಿದೆ.

ಎಲ್ಲಾ ಕಾರ್ಯಕರ್ತರು ಮತ್ತು ಶಾಸಕರಿಗು ಅವಕಾಶ ನೀಡುವ ಉದ್ದೇಶದಿಂದ ನಿಗಮ ಮಂಡಳಿಗಳಿಗೆ ಎರಡೂವರೆ ವರ್ಷದವರೆಗೆ ನೇಮಕ, ಬಳಿಕ ಮತ್ತೆ ಉಳಿದವರಿಗೆ ಅವಕಾಶ ನೀಡಲು ನಿರ್ಧಾರ.

Exit mobile version