Site icon PowerTV

ಬೆಳಗಾವಿ, ಜೈನ ಕಾಲೇಜ್ ಮೈದಾನದಲ್ಲೊಂದು ಭೀಕರ ಹತ್ಯೆ

ಬೆಳಗಾವಿ : ಕಾಲೇಜು ಮೈದಾನದ ಪಕ್ಕದಲ್ಲಿ ಭೀಕರ ಹತ್ಯೆಯೊಂದು ನೆಡೆದಿದೆ.

ಪೀರನವಾಡಿ ನಿವಾಸಿಯಾದ ಅರ್ಬಾಜ್ ಮುಲ್ಲಾ (25) ದುರ್ದೈವಿ ಎಂಬಾತನ ಭೀಕರ ಹತ್ಯೆ, ಬೆಳಗಾವಿ ಪಿರಾನವಾಡಿಯಲ್ಲಿರುವ ಜೈನ ಕಾಲೇಜಿನ ಮೈದಾನದ ಪಕ್ಕದ ಖುಲ್ಲಾ ಜಾಗದಲ್ಲಿ ಈ ಘಟನೆ ನೆಡೆದಿದೆ.

ಕಳೆದ ರಾತ್ರಿ ಎಲ್ಲರು ಸೇರಿ ಪಾರ್ಟಿ ಮಾಡಿ ಮನೆಗೆ ಹೋಗುವ ಸಂದರ್ಭದಲ್ಲಿ ಅರ್ಬಾಜ್ ಮುಲ್ಲಾ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆದ ದುಷ್ಕರ್ಮಿಗಳು. ಬೆಳಗ್ಗೆ ಬಂದು ನೋಡಿದ ಕಾಲೇಜು ವಿದ್ಯಾರ್ಥಿಗಳು ಬೆಚ್ಚಿ ಬಿದ್ದಿದ್ದಾರೆ,

ಇದನ್ನು ಓದಿ : ಗೃಹಲಕ್ಷ್ಮಿಗೆ ಸರ್ವರ್​ ಕಾಟದ ಪ್ರಶ್ನೆಯೇ ಇಲ್ಲ :ಸಚಿವೆ ಲಕ್ಷ್ಮಿಹೆಬ್ಬಾಳ್ಕರ್

ಬಳಿಕ ಸ್ಥಳಕ್ಕೆ ಗ್ರಾಮೀಣ ಠಾಣೆ ಪೋಲಿಸರು ಹಾಗೂ ಡಿಸಿಪಿ ಭೇಟಿ ನೀಡಿ ಪರಿಶೀಲನೆಯನ್ನು ನೆಡೆಸಿದ್ದಾರೆ.

ಮುಗಿಲು ಮುಟ್ಟಿದ ದುರ್ದೈವಿ ಅರ್ಬಾಜ್ ಮುಲ್ಲಾ ಕುಟುಂಬಸ್ಥರ ಆಕ್ರಂದನ. ದುಷ್ಕರ್ಮಿಗಳು ಪರಾರಿಯಾಗಿದ್ದರಿಂದ ಗ್ರಾಮೀಣ ಪೋಲಿಸರು ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಕೂಡ ಸ್ಥಳಕ್ಕೆ ಬಂದು ಪರಿಶೀಲನೆಯನ್ನು ಮಾಡಿ ಆರೋಪಿಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.

Exit mobile version