Site icon PowerTV

ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಉಡುಪಿ  : ತಾನು ಕೆಲಸ ಮಾಡುವ ಸಂಸ್ಥೆಯಲ್ಲೇ ನೇಣು ಬಿಗಿದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಕಾರ್ಕಳ‌ ಮಾರ್ಕೆಟ್ ಬಳಿ ನಡೆದಿದೆ.

ಹೌದು, ಇಂದು ಬೆಳಗ್ಗೆ ಕಾರ್ಕಳ ಮಾರ್ಕೆಟ್ ಬಳಿ ಇರುವ ವಿವಿದ್ದೋದೇಶ ಸಹಕಾರಿ ಸಂಘ ನಿಯಮಿತಿ ಸಂಸ್ಥೆಯಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ,  ಮಾರ್ಕೆಟ್ ರಸ್ತೆಯ ಶಾರಾದ ಪಾಲೇಸ್ ಮುಂಭಾಗದ‌ ನಿವಾಸಿ ಪ್ರಮೀಳಾ ದೇವಾಡಿಗ(32) ದುರ್ದೈವಿ, ಎಂಬುವವರು ಈ ಕೃತ್ಯವನ್ನು ಮಾಡಿಕೊಂಡಿದ್ದಾರೆ,

ಇದನ್ನು ಓದಿ : ಕಾಲಿಟ್ಟಲೆಲ್ಲಾ ಕೆಸರು, ಹೈರಾಣದ ಊರಿನ ಗ್ರಾಮಸ್ಥರು

ಬೆಳಗ್ಗೆ ಕಚೇರಿಗೆ ಆಕೆಯೇ ಮೊದಲು ಭೇಟಿ ನೀಡಿ ಅಲ್ಲಿನ ಸ್ಥಿತಿ ಗತಿಗಳನ್ನು ಗಮನಿಸಿದ ಬಳಿಕ ಮತ್ತೆ ಮನೆಗೆ ತೆರಳಿದ್ದಾಳೆ, ಮನೆಗೆ ಹೋಗಿ ತನ್ನ ಸೀರೆಯನ್ನು ತಂದು ಕಚೇರಿಯಲ್ಲಿ ಯಾರಾದರೂ ಇದ್ದರಾ ಎಂದು ನೋಡಿ, ನಂತರ ಯಾರೂ ಇಲ್ಲದ ಸಂದರ್ಭದಲ್ಲಿ

ಕುತ್ತಿಗೆಗೆ ನೇಣು ಬಿಗಿದುಕೊಂಡು ಸಾಯುವ ಕೃತ್ಯವನ್ನು ಎಸಗಿದ್ದಾರೆ. ಅವರಿಗೆ ಒಂದು ಗಂಡು ಮಗು ಕೂಡ ಇತ್ತು.

ಈ ಬಗ್ಗೆ ಕಾರ್ಕಳ ‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಆದರೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಇನ್ನು ಕಾರಣ ತಿಳಿದು ಬಂದಿಲ್ಲ ಆದ್ದರಿಂದ ಪ್ರಕರಣದ ಬಗ್ಗೆ ಕ್ರಮಕೈಗೊಳ್ಳಲಾಗಿದೆ.

Exit mobile version