Site icon PowerTV

ಕರ್ತವ್ಯ ಲೋಪ : ಮೂವರು ಪಿಡಿಒ ಅಮಾನತು

ಹಾಸನ: ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ 18ಎ ನಿವೇಶನವನ್ನು ಖಾಸಗೀ ವ್ಯಕ್ತಿಗೆ ಮಾಡಿಕೊಟ್ಟಿದ್ದಾರೆಂಬ ಆರೋಪ ಹಿನ್ನೆಲೆ ಮೂವರು ಪಿಡಿಓಗಳ ಅಮಾನತು ಮಾಡಿದ್ದಾರೆ.

ಚನ್ನರಾಯಪಟ್ಟಣ ತಾಲ್ಲೂಕಿನ ಬಳದರೆ ಗ್ರಾಮಪಂಚಾಯತ್ ನಲ್ಲಿ ಕೆಲಸ ಮಾಡಿದ್ದ ಮೂವರು ಪಿಡಿಓಗಳು ಅಮಾನತು ಮಾಡಿ ಎಂದು ಜಿಲ್ಲಾ ಪಂಚಾಯತ್ ಸಿಇಓ ಪೂರ್ಣಿಮಾ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಬೆಲೆ ಏರಿಕೆ ಎಫೆಕ್ಟ್ : ಅಂಗನವಾಡಿ ಬಿಸಿಯೂಟದಲ್ಲೂ ಪೌಷ್ಠಿಕಾಂಶದ ಕೊರತೆ 

ಚನ್ನರಾಯಪಟ್ಟಣ ತಾಲ್ಲೂಕಿನ ಬಳದರೆ ಗ್ರಾಮ ಪಂಚಾಯಿತಿಯಲ್ಲಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಮಿಸಲಿಟ್ಟ 18 ಎ ನಿವೇಶನವನ್ನು ಖಾಸಗಿ ವ್ಯಕ್ತಿಯ ಹೆಸರಿಗೆ ದಾಖಲು ಮಾಡಿರುವ ಹಿನ್ನೆಲೆಯಲ್ಲಿ ಈ ಅಮಾನತು ಮಾಡಲಾಗಿದೆ.

ಈ ಹಿಂದೆ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಾಲಿ ಡಿ.ಕಾಳೇನಹಳ್ಳಿ ಪಿಡಿಓ ಆಗಿರುವ ಸಿ.ಎನ್.ನವೀನ್, ಕೆಂಬಾಳು/ಬಾಗೂರು ಪಿಡಿಒ ಕೃಷ್ಣೇಗೌಡ, ಡಿ.ಬಳದರೆ ಹಾಗೂ ದಿಂಡಗೂರು ಪಿಡಿಓ ಆಗಿರುವ ರಾಮಸ್ವಾಮಿ ಅಮಾನತು ಮಾಡಿದ್ದಾರೆ.

 

 

Exit mobile version