Site icon PowerTV

ಗಣಿಗಾರಿಕೆ ಮಾಡುವ ವೃತ್ತಿ ನನ್ನದಲ್ಲ : ಮುನಿರತ್ನ ಪ್ರತಿಕ್ರಿಯೆ

ಬೆಂಗಳೂರು: ಜಿಲೆಟಿನ್ ಬಳಸಿ ಅಕ್ರಮ ಕಲ್ಲು ಗಣಿಗಾರಿಕೆ (Stone Mining) ವಿಚಾರದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್​ಐಆರ್ ಕುರಿತು ಮಾಜಿ ಸಚಿವ ಮುನಿರತ್ನ (Former Minister Munirathna) ಪ್ರತಿಕ್ರಿಯೆ ನೀಡಿದ್ದಾರೆ. 

ಹೌದು, ವಿಧಾನಸೌಧದಲ್ಲಿ ಮುಂಭಾಗದಲ್ಲಿ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಗಣಿಗಾರಿಕೆ ಮಾಡುವ ವೃತ್ತಿ ನನ್ನದಲ್ಲ, ಗಣಿಗಾರಿಕೆ ಅಂದ್ರೆ ಏನು ಅಂತಲೂ ಗೊತ್ತಿಲ್ಲ, ನಾನು ಮನೆ ಕಟ್ಟಲು ಪಾಯ ತೆಗೆಯುಸುತ್ತಿದ್ದೇನೆ ಅಷ್ಟೇ ಎಂದು ಮಾಜಿ ಸಚಿವ ಮುನಿರತ್ನ ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸದನದಲ್ಲಿ ‘ಯತ್ನಾಳ್-ಕೋನರೆಡ್ಡಿ’ ಜಟಾಪಟಿ

ನಾನು ಪಾಯ ತೆಗೆಯಲು ಹಿಟಾಚಿ ಬಳಕೆ ಮಾಡಲಾಗ್ತಿದೆಯೇ ಹೊರತು ಯಾವುದೇ ಸ್ಪೋಟಕ ವಸ್ತು ಬಳಕೆ ಮಾಡಿಲ್ಲ. ಬಹಳಷ್ಟು ಜನರ ಕೈ ಬದಲಾಗಿ ನನಗೆ ಆಗ ಸ್ಥಳ  ಸಿಕ್ಕಿದೆ. ಅದು ಪರ್ಚೇಸ್ ಲ್ಯಾಂಡ್, ಸ್ವಂತ ಲ್ಯಾಂಡ್ ಅಲ್ಲ ಎಂದು ತಿಳಿಸಿದರು.

 

 

Exit mobile version