Site icon PowerTV

ಬೆಲೆ ಏರಿಕೆ ಎಫೆಕ್ಟ್ : ಅಂಗನವಾಡಿ ಬಿಸಿಯೂಟದಲ್ಲೂ ಪೌಷ್ಠಿಕಾಂಶದ ಕೊರತೆ 

ಬೆಂಗಳೂರು: ಅಂಗನವಾಡಿ ಕೇಂದ್ರಗಳಿಗೂ ತರಕಾರಿ ಬೆಲೆ ಏರಿಕೆ ಶಾಕ್ ಎದುರಾಗಿದೆ.

ಹೌದು, ತರಕಾರಿ ಹಾಗೂ  ದಿನನಿತ್ಯ ಬಳಸುವ ವಸ್ತುಗಳು ಬೆಲೆ ಏರಿಕೆಯ ಹಿನ್ನೆಲೆ ತರಕಾರಿ ಖರೀದಿಗೂ ಹಿಂದೆ ಮುಂದೆ ಯೋಚಿಸುವ ಪರಿಸ್ಥಿತಿ ಎದುರಾಗಿದೆ. ದುಬಾರಿ ಬೆಲೆ ಕಾರಣ ಶಾಲಾ ಪೌಷ್ಠಿಕಾಂಶದ ಕೊರತೆ ಅಂಗನವಾಡಿಯಲ್ಲಿ ಬಿಸಿಯೂಟದಲ್ಲಿ ಪ್ರಭಾವ ಬೀರಿದೆ.

ಇನ್ನೂ ಅಂಗನವಾಡಿ ಕೇಂದ್ರಗಳು‌ ನೀಡುತ್ತಿರೋ ಊಟದಲ್ಲಿ ತರಕಾರಿ ತುಂಡುಗಳೆ ನಾಪತ್ತೆ ಆಗಿದೆ. ಅಂಗನವಾಡಿ ಕೇಂದ್ರಗಳು ಬರಿ ಅನ್ನ ಮತ್ತು ತಿಳಿಸಾರು ಗತಿ ಎನ್ನುವ ಪರಿಸ್ಥತಿ ಬಂದಿದೆ.

ಇದನ್ನೂ ಓದಿ: ಟೊಮೆಟೊ, ಮೆಣಸಿನಕಾಯಿ ಬೆಲೆ ಕೇಳಿ ಜನ ತತ್ತರ!

ಮಕ್ಕಳು ಮತ್ತು ಬಾಣಂತಿಯಾರಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿತ್ತು. ಬೆಲೆ ಏರಿಕೆ ಬೆನ್ನಲೆ ಅಂಗನವಾಡಿಗಳಲ್ಲಿ  ಒದಗಿಸುತ್ತಿರುವ ಆಹಾರದಲ್ಲಿ ಪೌಷ್ಠಿಕತೆ ಕಡಿಮೆ ಇದೆ. ಸೊಪ್ಪು, ತರಕಾರಿ ಊಟ ನೀಡುತ್ತಿದ್ದ ಕೇಂದ್ರಗಳು, ಇದೀಗ ಸೊಪ್ಪು, ತರಕಾರಿ ಗಗನಕೆ ಏರಿದೆ.

ಬೆಲೆ ಏರಿಕೆಯಿಂದಾಗಿ ಎಲ್ಲಾ ವಲಯಗಳಲ್ಲೂ ಪ್ರಭಾವ ಬೀರಿದೆ.

 

Exit mobile version