Site icon PowerTV

ರೈತನ ಮೇಲೆ ಕರಡಿ ದಾಳಿ, ಬೆಚ್ಚಿಬಿದ್ದ ಜನ

ತುಮಕೂರು: ರೈತನ ಮೇಲೆ ಕರಡಿ ದಾಳಿ ಮಾಡಿ ತೀವ್ರ ಗಾಯ ಆಗಿರುವ ಘಟನೆ ತಾಲ್ಲೂಕಿನ ಎತ್ತಿನಹಳ್ಳಿ ಗ್ರಾಮದಲ್ಲಿ ನಡೆದಿದೆ. 

ಜಮೀನಿನ ಕಡೆಗೆ ಹೋಗುತ್ತಿದ್ದಾಗ ಕರಡಿ ಪ್ರತಾಪ ರೆಡ್ಡಿ (45) ಮೇಲೆ ದಾಳಿ ಮಾಡಿದ್ದು, ತಲೆ, ಮುಖದ ಭಾಗದಲ್ಲಿ ಗಾಯಗಳಾಗಿವೆ.

ತೀವ್ರವಾಗಿ ಗಾಯಗೊಂಡಿದ್ದ ಪ್ರತಾಪರೆಡ್ಡಿ ಅವರನ್ನು ಗ್ರಾಮಸ್ಥರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ ಭೇಟಿ ನೀಡಿ ಪರಿಶೀಲಿಸಿದರು.

ಜಮೀನಿನಲ್ಲಿರುವ ನೇರಳೆ, ಹಲಸು ಸೇರಿದಂತೆ ವಿವಿಧ ಬಗೆಯ ಹಣ್ಣುಗಳಿಗಾಗಿ ಕರಡಿಗಳು ಓಡಾಡುತ್ತಿರುತ್ತವೆ. ರೈತರು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ

 

 

Exit mobile version