Site icon PowerTV

ಅಕ್ಕಿ ಯಾಕ್ರೀ ಕೊಟ್ಟಿಲ್ಲ : ಶಿವಲಿಂಗೇಗೌಡ ಸಿಡಿಮಿಡಿ

ಬೆಂಗಳೂರು: ಅಕ್ಕಿ ಯಾಕ್ರೀ ಕೊಟ್ಟಿಲ್ಲ ನಾನು ನಿಮ್ಮನ್ನ ಸುಮ್ನೆ ಬಿಡಲ್ಲ ಇದು ವಿಧಾನಸೌಧದಲ್ಲಿ ಶಾಸಕ ಶಿವಲಿಂಗೇಗೌಡ ಸಿಡಿಮಿಡಿಗೊಂಡಿದ್ದಾರೆ.

ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಣೆ ವಿಚಾರವನ್ನು ಶಿವಲಿಂಗೇಗೌಡ ಸದನದಲ್ಲಿ ಪ್ರಸ್ತಾಪಿಸಿದ್ದಾರೆ.ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹಾಗೇ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ನಿಮ್ಮನ್ನ ವಿಪಕ್ಷ ನಾಯಕ ಮಾಡಲ್ಲ : ಯತ್ನಾಳ್ ಗೆ ರಾಜಣ್ಣ ಕೌಂಟರ್

ನಾವು ನಿಮ್ಮನ್ನು ಸುಮ್ಮನೆ ಬಿಡೋಕೆ ಆಗುತ್ತಾ..? ಅಕ್ಕಿ ಯಾಕ್ರೀ ಕೊಟ್ಟಿಲ್ಲ.. ಅಂತಾ ಶಿವಲಿಂಗೇಗೌಡ ಅಬ್ಬರಿಸಿದರು. ಇದಕ್ಕೆ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ರು. ಇಷ್ಟು ದಿನ ಜೆಡಿಎಸ್ ನಲ್ಲಿದ್ರೀ.. ಈಗ ಕಾಂಗ್ರೆಸ್ ನಲ್ಲಿದ್ದೀರಿ.. ಅಲ್ಲಿ ಏನ್ ಮಾಡಿದ್ರೀ.. ಇಲ್ಲಿ ಏನ್ ಮಾಡಿದ್ದೀರಾ ಹೇಳಿ ಅಂತಾ ಶಾಸಕ ಸುನೀಲ್ ಕುಮಾರ್ ಗುಡುಗಿದರು.

 

 

Exit mobile version