Site icon PowerTV

ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಲ್ಲಿ ಲಕ್ಷ ಲಕ್ಷ ವಂಚನೆ

ಬೆಂಗಳೂರು : ಟಿವಿ ಶೋಗಳಲ್ಲಿ ಮಕ್ಕಳಿಗೆ ಚಾನ್ಸ್‌ ಕೊಡಿಸುವುದಾಗಿ ನಟ ಮಾಸ್ಟರ್‌ ಆನಂದ್‌ ಪುತ್ರಿ ವಂಶಿಕಾ ಹೆಸರಲ್ಲಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮಾಡೆಲಿಂಗ್‌ ನಿಶಾ ವಂಚನೆ ಮಾಡಿದರುವ ಮಹಿಳೆ ಎಂದು ಗುರುತಿಸಲಾಗಿದೆ. ಈಕೆ, ಮಕ್ಕಳಿಗೆ ಚಾನ್ಸ್ ಕೊಡಿಸುತ್ತೇನೆ ಎಂದು ಪೋಷಕರ ಬಳಿ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ್ದಾಳೆ. ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.

ಇದನ್ನೂ ಓದಿ : ಸುಲಿಗೆ ಮಾಡುತ್ತಿದ್ದ ಮಂಗಳಮುಖಿಯರ ಗ್ಯಾಂಗ್ ಅರೆಸ್ಟ್

ಚಾನ್ಸ್ ಕೊಡಿಸುವ ನೆಪದಲ್ಲಿ ಪಂಗನಾಮ

ಚಾನ್ಸ್ ಕೊಡಿಸುವ ನೆಪದಲ್ಲಿ ಮಕ್ಕಳ ಪೋಟೋ ಶೂಟ್ ಮಾಡಿಸಿ ಹಣ ಪೀಕುತ್ತಿದ್ದಳು. ಮಾಸ್ಟರ್ ಆನಂದ್ ಮಗಳು ವಂಶಿಕ ಹೆಸರು ಬಳಸಿ ವಂಚನೆ ಮಾಡುತ್ತಿದ್ದಳು. ಹೀಗಾಗಿ, ವಂಶಿಕ ತಾಯಿ ಯಶಸ್ವಿನಿ ಆನಂದ್ ಈ ಬಗ್ಗೆ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆ್ಯಡ್ ಶೂಟ್, ಟಿವಿ ಕಾರ್ಯಕ್ರಮಗಳು, ಮಕ್ಕಳ ಟ್ಯಾಲೆಂಟ್ ಶೋ ಹಾಗೂ ಖಾಸಗಿ ಚಾನಲ್ ನಲ್ಲಿ ಟ್ಯಾಲೆಂಟ್ ಶೋ ನೆಪದಲ್ಲಿ ವಂಚನೆ ಮಾಡಲಾಗುತ್ತಿತ್ತು. ನಿಮ್ಮ ಮಕ್ಕಳಿಗೆ ಚಾನ್ಸ್ ಕೊಡಿಸುತ್ತೇನೆ ಎಂದು ನೂರಾರು ಪೋಷಕರಿಂದ ಈ ಮಹಿಳೆ ಲಕ್ಷಾಂತರ ರೂ. ಹಣ ಪಡೆದ್ದಾಳೆ.

Exit mobile version