Site icon PowerTV

ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಾಗರಹಾವು ಸಾವು

ಧಾರವಾಡ : ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಾಗರಹಾವೊಂದು ಚಿಕಿತ್ಸೆ ಬಳಿಕವೂ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಮನಸೂರು ಗ್ರಾಮದಲ್ಲಿ ನಡೆದಿದೆ.

ಮನಸೂರು ಗ್ರಾಮದಲ್ಲಿ ಮನೋಜ್ ಎಂಬುವವರಿಗೆ ನಾಗರಹಾವೊಂದು ಸಿಕ್ಕಿತ್ತು. ಹಾವಿನ ರಕ್ಷಣೆ ಮಾಡುವ ವೇಳೆ ಗಂಟಲಿನಲ್ಲಿ ಕ್ಯಾನ್ಸರ್ ಗಡ್ಡೆಯೊಂದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಮನೋಜ್ ಧಾರವಾಡದ ಪಶು ಆಸ್ಪತ್ರೆಯಲ್ಲಿ ಹಾವಿಗೆ ಚಿಕಿತ್ಸೆ ಕೊಡಿಸಿದ್ದರು.

ಇದನ್ನು ಓದಿ : ವರ್ಗಾವಣೆ ದಂಧೆ ಲಿಸ್ಟ್ ತೋರಿಸಿ ಸರಿಪಡಿಸಿಕೊಳ್ಳಿ ಎಂದ ಕುಮಾರಸ್ವಾಮಿ

ಚಿಕಿತ್ಸೆ ಬಳಿಕ ನಾಗರಹಾವು ಆರೈಕೆಯಲ್ಲಿತ್ತು. ಆದರೆ, ಒಂದು ದಿನದ ಬಳಿಕ ಚಿಕಿತ್ಸೆ ಫಲಿಸದೆ ಹಾವು ಸಾವನ್ನಪ್ಪಿದೆ. ಇನ್ನೂ ಹಾವನ್ನು ರಕ್ಷಿಸಿ, ಚಿಕಿತ್ಸೆ ಕೊಡಿಸಿದ್ದ ಮನೋಜ್ ಅವರೇ ಹಾವಿನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

Exit mobile version