Site icon PowerTV

ದೇವಸ್ಥಾನ ಸಮಿತಿಯಲ್ಲಿ ವಿಶ್ವಕರ್ಮ ಸಮಾಜಕ್ಕೆ ಸದಸ್ಯತ್ವ ನೀಡಬೇಕು : ಕೆ.ಪಿ ನಂಜುಂಡಿ

ಬೆಂಗಳೂರು : ದೇವಸ್ಥಾನಗಳ ಸಮಿತಿಯಲ್ಲಿ ವಿಶ್ವಕರ್ಮ ಸಮಾಜದ ಒಬ್ಬರಿಗೆ ಸದಸ್ಯತ್ವ ಸ್ಥಾನ ನೀಡಬೇಕು ಎಂದು ಬಿಜೆಪಿ ಸದಸ್ಯ ಕೆ.ಪಿ ನಂಜುಂಡಿ ಆಗ್ರಹಿಸಿದರು.

ವಿಧಾನ ಪರಿಷತ್ ನಲ್ಲಿ ಮಾತನಾಡಿದ ಅವರು, ಯಾವ ಸರ್ಕಾರವೂ ನಮ್ಮ ಸಮುದಾಯವನ್ನು ಗುರುತಿಸಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ದೊಡ್ಡ ದೊಡ್ಡ ದೇವಸ್ಥಾನ ಕಟ್ಟಿದ ಸಮಾಜ ಕಡೆಗಣನೆಗೆ ಒಳಗಾಗಿದೆ. ವಿಶ್ವಕರ್ಮ ಜಯಂತಿಗೂ ಜನಪ್ರತಿನಿಧಿಗಳು ಬರಲ್ಲ. ಬಿಜೆಪಿ ಸರ್ಕಾರ ಇದ್ದಾಗ ಉಸ್ತುವಾರಿ ಸಚಿವರೂ ಬರುತ್ತಿರಲಿಲ್ಲ ಎಂದು ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಅವರ್ಯಾರಿ ನನ್ನ ಕಿತ್ತು ಹಾಕೋಕೆ : ಡಿಕೆಶಿ ವಿರುದ್ಧ ಯತ್ನಾಳ್ ಕಿಡಿ

ಎಲ್ಲವನ್ನೂ ಕೇಳಿಯೇ ಪಡೆಯುವ ಸ್ಥಿತಿ

ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಜಯಂತಿಗೆ ಬರುತ್ತಾರೆ. ದೇವಸ್ಥಾನ ಸಮಿತಿಯಲ್ಲಿ ಅವಕಾಶ ಕಲ್ಪಿಸಬೇಕು. ಎಲ್ಲವನ್ನೂ ಕೇಳಿಯೇ ಪಡೆಯುವ ಸ್ಥಿತಿ ಇದೆ. ದೇಶದಲ್ಲಿ ಸಂಸ್ಕೃತಿ ಬಗ್ಗೆ ಮಾತನಾಡಲು ವಿಶ್ವಕರ್ಮ ಸಮಾಜ ಮಾಡಿದ ಕಾರ್ಯವನ್ನೇ ಉಲ್ಲೇಖಿಸಬೇಕು ಎಂದು ಹೇಳಿದರು.

ಸಮಿತಿಯಲ್ಲಿ ಅವಕಾಶ ಕಲ್ಪಿಸುತ್ತೇವೆ

ಈ ವೇಳೆ ಮಾತನಾಡಿದ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು, ದೇವಸ್ಥಾನ ಸಮಿತಿಯಲ್ಲಿ ಅವಕಾಶ ಕಲ್ಪಿಸುತ್ತೇವೆ. ಅದಕ್ಕೆ ಬೇಕಾದ ತಿದ್ದುಪಡಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

Exit mobile version