Site icon PowerTV

ಬೀದಿಗಳಿದು ಪ್ರತಿಭಟನೆ ಮಾಡಿದ ಕಿಚ್ಚ ಸುದೀಪ್ ಅಭಿಮಾನಿಗಳು

ಚಾಮರಾಜನಗರ : ಸುದೀಪ್ ಹಣ ಪಡೆದು ಸಿನಿಮಾ ಮಾಡಿಲ್ಲ ಅಂತ ಅರೋಪ ಮಾಡಿರುವ ಎಮ್ ಎನ್ ಕುಮಾರ್, ರೆಹಮಾನ್ ನಿರ್ಮಾಪಕರ ಅರೋಪಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿರುವವರ ಮೇಲೆ ಸುದೀಪ್ ಫ್ಯಾನ್ಸ್ ಚಾಮರಾಜನಗರದಲ್ಲಿ ಬೀದಿಗಳಿದು ಪ್ರತಿಭಟನೆ ಮಾಡಿದ್ದಾರೆ. 

ಹೌದು,ಕೆಲ ದಿನಗಳ ಹಿಂದೆ ನಿರ್ಮಾಪಕ ಎಂ.ಎನ್ ಕುಮಾರ್ ಅವರು ನಟ ಸುದೀಪ್ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದರು ಅದಕ್ಕೆ ಕಿಚ್ಚ ಸುದೀಪ್ ಅವರು ವಕೀಲರ ಮೂಲಕ ಎಂ ಎನ್ ಕುಮಾರ್‌ಗೆ ಲೀಗಲ್ ನೋಟೀಸ್ ಕೂಡ ನೀಡಿದ್ದಾರೆ. ಆದರೆ ಇದೇ ವಿಚಾರವಾಗಿ ಕಿಚ್ಚ ಸುದೀಪ್​ ಅಭಿಮಾನಿಗಳ  ಭುವನೇಶ್ವರಿ ವೃತ್ತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಮಾನವ ಸರಪಳಿ‌  ನಿರ್ಮಿಸಿ ಪ್ರತಿಭಟನೆ ಮಾಡಿದ್ದಾರೆ.

ಇದನ್ನೂ ಓದಿ: ನಿರ್ಮಾಪಕ ಕುಮಾರ್ ವಿರುದ್ಧ ಸಿಡಿದೆದ್ದ ಕಿಚ್ಚ : 10 ಕೋಟಿ ಮಾನನಷ್ಟದ ಲೀಗಲ್ ನೋಟಿಸ್ ಕೊಟ್ಟ…

ಒಂದು ಗಂಟೆಗಳ ಕಾಲ ರಸ್ತೆ ತಡೆದು,ಕಿಚ್ಚ ಸುದೀಪ್ ಅಭಿಮಾನಿಗಳು ಚಾಮರಾಜನಗರದಲ್ಲಿ ನಿರ್ಮಾಪಕ M.N.ಕುಮಾರ್‌ ವಿರುದ್ಧ ಕಿಚ್ಚನ ಫ್ಯಾನ್ಸ್ ಪ್ರತಿಭಟನೆ ಮಾಡಿದ್ದಾರೆ.

ಪ್ರತಿಭಟನೆಯಲ್ಲಿ ಎ‌. ಗಣೇಶ್, M. N. ಕುಮಾರ್, ಪ್ರವೀಣ್ ಅವರ ಪೋಟೋಗೆ ಚಪ್ಪಲಿಯಲ್ಲಿ ಹೊಡೆದು ಅಕ್ರೋಶವನ್ನೂ ಅಭಿಮಾನಿಗಳು ವ್ಯಕ್ಕಪಡಿಸಿದ್ದಾರೆ. ಇನ್ನು ನಿರ್ಮಾಪಕ ಕೂಡಲೇ ತಮ್ಮ ತಪ್ಪು ಆರೋಪವನ್ನು ಒಪ್ಪಿಕೊಳ್ಳಬೇಕು ಎಂದು ಒತ್ತಾಯ ಮಾಡಿದ್ಧಾರೆ. ಕಿಚ್ಚ ಸುದೀಪ್ ಬಳಿ ಕ್ಷೇಮೆ ಕೇಳಬೇಕು ತಪ್ಪಿದ್ದಲ್ಲಿ ಅವರ ಚಿತ್ರ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆಯನ್ನು ಅಭಿಮಾನಿಗಳು ನೀಡಿದ್ದಾರೆ.

Exit mobile version