Site icon PowerTV

Power Exclusive : ಬಿಡಿಎ ನುಂಗುಬಾಕ ಅಧಿಕಾರಿಗಳ ಅಟ್ಟಹಾಸಕ್ಕೆ ಫ್ಲ್ಯಾಟ್ ನಿವಾಸಿಗಳು ವಿಲವಿಲ

ಬೆಂಗಳೂರು: ನೀವು ಬೆಂಗಳೂರಿನ ಫ್ಲ್ಯಾಟ್‌ ನಿವಾಸಿಗಳಾಗಿದ್ರೆ ಈ ಸುದ್ದಿಯನ್ನು ಓದಲೇ ಬೇಕು. ಈ EXCLUSIVE ಸ್ಟೋರಿ ಪವರ್​ ಟಿವಿಯಲ್ಲಿ ರಿವೀಲ್​ ಆಗಿದೆ.

ಹೌದು, ಬಿಡಿಎ ಅಂದ್ರೆ ಹಗರಣ,ಹಗರಣ ಅಂದ್ರೆ ಬಿಡಿಎ. ನುಂಗಬಾಕ ಅಧಿಕಾರಿಗಳ ಮೋಸಕ್ಕೆ ಫ್ಲ್ಯಾಟ್ ನಿವಾಸಿಗಳಿಗೆ ಪರದಾಡುವ ಸ್ಥಿತಿ ಒದಗಿ ಬಂದಿದೆ. ಇನ್ನೂ ಲಕ್ಷ ಲಕ್ಷ ಹಣ ಕೊಟ್ಟು ಫ್ಲ್ಯಾಟ್ ಖರೀದಿ ಮಾಡಿದ್ದರೂ ಒದ್ದಾಟ ಮಾತ್ರ ತಪ್ಪಿಲ್ಲ. ಬೆಂಗಳೂರು ಅಭಿವೃದ್ಧಿ ಸಚಿವರೇ ಇಲ್ಲಿನ ದುಸ್ಥಿತಿ ನೀವು ಕೇಳಲೇಬೇಕು.

ಬಿಡಿಎ ಫ್ಲ್ಯಾಟ್‌ ನಿವಾಸಿಗಳ ಗೋಳು ಕೇಳೋರಿಲ್ವಾ?

ಲಕ್ಷ ಲಕ್ಷ ಕೊಟ್ಟು ಫ್ಲ್ಯಾಟ್‌ ಖರೀದಿಸಿದ್ರೆ ಕಳ್ಳರು, ಕುಡುಕರ ಅಡ್ಡಗಳಾಗಿವೆ. ಮೂಲಸೌಕರ್ಯಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿ ಪ್ರತಿನಿತ್ಯ ಜೀವನ ಮಾಡುತ್ತಿದ್ದಾರೆ. ಬಿಡಿಎ ವಿರುದ್ಧ ನಿವಾಸಿಗಳ ಹಿಡಿಶಾಪವಾಕಿದ್ರೂ ಯಾವುದೇ ಪ್ರಯೋಜನವಿಲ್ಲದಂತೆ ಆಗಿದೆ.

ಇದನ್ನೂ ಓದಿ: ಪವರ್​ಟಿವಿ ಇಂಪ್ಯಾಕ್ಟ್​: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮ,ಸಮಗ್ರ ತನಿಖೆಗೆ ಸರ್ಕಾರ ಆದೇಶ

ಫ್ಲ್ಯಾಟ್‌ ಫೇಸ್‌ 2, 3, 4ನಲ್ಲಿ 2200ಕ್ಕೂ ಹೆಚ್ಚು ಫ್ಲ್ಯಾಟ್‌ಗಳ ನಿರ್ಮಾಣವಾಗಿದ್ರೂ 2016ರಿಂದ ಕೇವಲ 200 ಫ್ಲ್ಯಾಟ್‌ಗಳು ಮಾತ್ರ ಸೇಲ್ ಆಗಿವೆ. ಇನ್ನೂ ಈ ಫ್ಲ್ಯಾಟ್​ಗಳಿಗೆ ಯಾವುದೇ ಡಿಮ್ಯಾಂಡ್‌ ಇಲ್ಲದಿದ್ರೂ ಕೂಡ ಲೂಟಿಗಿಳಿದಿದ್ದಾರೆ ಬಿಡಿಎ ಅಧಿಕಾರಿಗಳು.

ವಿದ್ಯುತ್, ನೀರು ಸಂಪರ್ಕ ಇಲ್ಲ, ಕಗ್ಗತ್ತಲಲ್ಲೇ ಜನರ ಇದ್ದರೂ ಕೂಡ ಲಕ್ಷ ಲಕ್ಷ ನಿರ್ವಹಣೆ ಶುಲ್ಕ ಕಟ್ಟಿಸಿಕೊಂಡು ವಂಚನೆ ಮಾಡುತ್ತಿದ್ದಾರೆ.

ಬೆಂಗಳೂರು ಅಭಿವೃದ್ಧಿ ಸಚಿವರೇ ಆದಷ್ಟು ಬೇಗ ಇಲ್ಲಿನ ದುಸ್ಥಿತಿ ನೋಡಿ. ಬಿಡಿಎ ಕಮಿಷನರ್‌, ಚೇರ್ಮನ್‌ ಅವ್ರೇ ಇದೇನಾ ನಿಮ್ಮ ನಿರ್ವಹಣೆ.

Exit mobile version