Site icon PowerTV

ಹಳೆ ದ್ವೇಷಕ್ಕೆ ಯುವಕನ ಕೊಲೆ: ಆರೋಪಿಗಳ ಬಂಧನ

ಬೆಂಗಳೂರು: ಹಳೆ ದ್ವೇಷದ ಹಿನ್ನೆಲೆ ಯುವಕನೊಬ್ಬನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ ಘಟನೆ ಕೆಂಗೇರಿ  ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಇದನ್ನೂ ಓದಿ: Power Exclusive : ಬಿಡಿಎ ನುಂಗುಬಾಕ ಅಧಿಕಾರಿಗಳ ಹಟ್ಟಹಾಸಕ್ಕೆ ಫ್ಲ್ಯಾಟ್ ನಿವಾಸಿಗಳು ವಿಲವಿಲ

ಮಹಮ್ಮದ್ ತಾಹೀರ್ ಮೃತ ಯುವಕ, ಈ ಹಿಂದೆ ನ್ಯಾಮತ್​ ಮತ್ತು ಕೊಲೆಯಾದ ತಾಹೀರ್ ನಡುವೆ ಜಗಳ ನಡೆದಿತ್ತು. ಈ ದ್ವೇಷದ ಹಿನ್ನೆಲೆ ನ್ಯಾಮತ್ ಮತ್ತು ಸಹಚರರು ಸೇರಿ ತಾಹೀರ್​ನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದರು.

ಸೋಮವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಿದ್ದ ತಾಹೀರ್​ ಗೆ, ರಾತ್ರಿ ಸುಮಾರು 11 ಗಂಟೆಗೆ ಕರೆ ಮಾಡಿ ಕರೆಸಿಕೊಂಡಿದ್ದ ಆರೋಪಿಗಳು ನಾಯಂಡಹಳ್ಳಿ ಬಳಿ ಆಟೋದಲ್ಲಿ ಕಿಡ್ನಾಪ್ ಮಾಡಿ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದರು.

ಸದ್ಯ ಕೊಲೆ ಪ್ರಕರಣದ ಆರೋಪಿಗಳನ್ನ ಕೆಂಗೇರಿ ಪೊಲೀಸ್ ಬಂಧಿಸಿದ್ದು ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version