Site icon PowerTV

ತಪ್ಪಿದ ಭಾರೀ ದುರಂತ : ಟ್ರೈನ್ ನಲ್ಲಿ ಬೆಂಕಿ, ಪ್ರಯಾಣಿಕರು ಬಚಾವ್

ಪಶ್ಚಿಮ ಬಂಗಾಳ : ಟ್ರೈನ್ ಗಳಲ್ಲಿ ಪ್ರಯಾಣಿಸುವುದು ಎಷ್ಟು ಉತ್ತಮವೋ, ಹಾಗೆಯೇ ಸ್ವಲ್ಪ ನಿರ್ಲಕ್ಷ್ಯ ತೋರಿದರೆ ಅಷ್ಟೇ ಅಪಾಯಕಾರಿಯಾಗಿರುತ್ತದೆ.

ಹೌದು, ಪಶ್ಚಿಮ ಬಂಗಾಳದ ಸಿಕಂದರಾಬಾದ್ ಮತ್ತು ಹೌರಾ ನಡುವೆ ಸಾಗುತ್ತಿರುವ ಫಲಕ್ನುಮಾ ಎಕ್ಸಪ್ರೆಸ್ (ರೈಲುಗಾಡಿ ಸಂಖ್ಯೆ 12703)ನ ರೈಲಿನಲ್ಲಿ ಬೆಂಕಿ ಅವಘಡ ನಡೆದ ಘಟನೆ. ಅದೃಷ್ಟವಶಾತ್ ರೈಲಿನಲ್ಲಿದ್ದ ಪ್ರಯಾಣಿಕರು ಬಚಾವ್ ಆಗಿದ್ದಾರೆ.

ಇದನ್ನು ಓದಿ : ನನ್ನ ಕುರ್ಚಿ ವಾಸ್ತು ಸರಿ ಇದ್ಯಲ್ಲಾ? ಎಂದ ಸ್ಪೀಕರ್ : ಗೊಂದಲ ಇದ್ರೆ ರೇವಣ್ಣ ಹತ್ರ ಕೇಳಿ ಎಂದ ಆರಗ

ಶುಕ್ರವಾರ ತೆಲಂಗಾಣದ ಯಾದಾದ್ರಿ-ಭುವನಗಿರಿ ಜಿಲ್ಲಾ ವ್ಯಾಪ್ತಿಯಲ್ಲಿ ಸಾಗುತ್ತಿರುವ ವೇಳೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಕ್ಕಪಕ್ಕದ ಬೋಗಿಗಳಲ್ಲಿದ್ದ ಜನರಿಗೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಜನರು ಭಯಭೀತರಾಗಿದ್ದರು. ಯಾವುದೇ ಅಪಾಯವಾಗದೆ ಜನರು ಸುರಕ್ಷಿತವಾಗಿ ಹೊರಬಂದರು.

ಸಿಗರೇಟ್ ನಿಂದ ಹೊತ್ತಿಕೊಂಡ ಬೆಂಕಿ

ಬೆಂಕಿ ಎಲ್ಲಿಂದ ಬಂತು ಎಂದು ನೋಡಿದಾಗ, ಚಾರ್ಜಿಂಗ್ ಪಾಯಿಂಟ್ ಬಳಿ ಒಬ್ಬ ವ್ಯಕ್ತಿ ಸಿಗರೇಟ್ ಸೇದುತ್ತಾ ನಿಂತಿರುವುದು ಕಂಡುಬಂದಿದೆ. ಈ ವೇಳೆ ಬೆಂಕಿ ಹೊತ್ತಿಕೊಂಡಿದೆ ಅಂತ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Exit mobile version