Site icon PowerTV

ಹಾಡಹಗಲೇ ಏರೋನಿಕ್ಸ್​ ಇಂಟರ್​ನೆಟ್​ ಕಂಪನಿ MD, CEO ಬರ್ಬರ ಹತ್ಯೆ!

ಬೆಂಗಳೂರು : ಹಾಡಹಗಲೇ ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಮತ್ತು ಸಿಇಒನ್ನನ್ನು ಕೊಲೆ ಮಾಡಿರುವ ಘಟನೆ ನಗರದ ಅಮೃತಹಳ್ಳಿಯಲ್ಲಿ ನಡೆದಿದೆ. ಈ ಕೃತ್ಯ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ.

ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಫಣಿಂದ್ರ ಸುಬ್ರಹ್ಮಣ್ಯ ಮತ್ತು ಸಿಇಒ ವಿನುಕುಮಾರ್​ ಕೊಲೆಯಾದ ವ್ಯಕ್ತಿಗಳು. ಕಂಪನಿಯ ಮಾಜಿ ಉದ್ಯೋಗಿ ಹಾಗೂ ಟಿಕ್ ಟಾಕ್ ಸ್ಟಾರ್ ಜೋಕರ್ ಫೆಲಿಕ್ಸ್ ಕೊಲೆ ಮಾಡಿರುವ ಆರೋಪಿ.

ಆರೋಪಿ ಫೆಲಿಕ್ಸ್ ಏರೋನಿಕ್ಸ್ ಇಂಟರ್ನೆಟ್ ಕಂಪನಿಯಿಂದ ಹೊರಬಂದು ಸ್ವಂತ ಕಂಪನಿ ಸ್ಥಾಪಿಸಿದ್ದನು. ಇದಕ್ಕೆ ಫಣಿಂದ್ರ ಸುಬ್ರಹ್ಮಣ್ಯ ಎದುರಾಳಿಯಾಗಿದ್ದ. ತನ್ನ ಬ್ಯುಸಿನೆಸ್​ಗೆ ಅಡ್ಡ ಬರುತ್ತಾರೆ ಎಂದು ಫೆಲಿಕ್ಸ್ ಕೊಲೆ ಮಾಡಲು ಸ್ಕೆಚ್ ಆಗಿದ್ದನು.

ಇದನ್ನೂ ಓದಿ : ವಿವಾಹ ವಾರ್ಷಿಕೋತ್ಸವ ದಿನದಂದೇ ಸ್ನೇಹಿತನನ್ನು ಹತ್ಯೆಗೈದ ಕಿರಾತಕರು

ಚಾಕುವಿನಿಂದ ಇರಿದು, ತಲ್ವಾರ್ ನಿಂದ ಹಲ್ಲೆ

ಸಂಜೆ 4 ಗಂಟೆ ಸುಮಾರಿಗೆ ನಗರದ ಪಂಪಾ ಬಡವಾಣೆಯ ಏರೋನಿಕ್ಸ್ ಕಂಪನಿಗೆ ಆಗಮಿಸಿದ ಆರೋಪಿ ಫೆಲಿಕ್ಸ್, ಎಂಡಿ ಪಣೀಂದ್ರ ಹಾಗೂ ವಿನುಕುಮಾರ್ ಗೆ ಚಾಕುವಿನಿಂದ ಇರಿದು, ತಲ್ವಾರ್​ನಿಂದ ಹಲ್ಲೆ ನಡೆಸಿದ್ದಾನೆ. ಫಣೀಂದ್ರ ಮತ್ತು ವಿನುಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ದುಷ್ಕರ್ಮಿಗಳಿಂದ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ಹತ್ಯೆ ಬಳಿಕ ಕಾಂಪೌಂಡ್ ಹಾರಿ ಹಂತಕರು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಫಣಿಂದ್ರ, ವಿನುಕುಮಾರ್ ಮೃತದೇಹಗಳನ್ನು ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version