Site icon PowerTV

ಗಗನಕ್ಕೇರಿದ ಟೊಮ್ಯಾಟೋ ಬೆಲೆ: ಟೊಮ್ಯಾಟೊ ತುಂಬಿದ ವಾಹನ ಕದ್ದೊಯ್ದ ಕಳ್ಳರು

ಬೆಂಗಳೂರು : ಟಮ್ಯಾಟೊ ತುಂಬಿದ ಬೊಲೇರೋ ವಾಹನ, ಕಾರ್​ಗೆ ತಾಗಿದೆ ಎಂದು ಜಗಳ ತೆಗೆದು ದುಷ್ಕರ್ಮಿಗಳು ಚಾಲಕನಿಗೆ ಥಳಿಸಿ ಟೊಮ್ಯಾಟೋ ತುಂಬಿದ್ದ ವಾಹನವನ್ನೇ ಹೈಜಾಕ್​ ಮಾಡಿದ ಘಟನೆ ನಗರದ ಪೀಣ್ಯ ಬಳಿ ನಡೆದಿದೆ.

ಇದನ್ನೂ ಓದಿ: ಶಿವಾಜಿನಗರ: ಹುಸಿಬಾಂಬ್​ ಕರೆ ಆರೋಪಿ ಬಂಧನ

ಹಿರಿಯೂರಿನಿಂದ ಕೋಲಾರಕ್ಕೆ 250 ಕ್ರೇಟ್​ಗಳಷ್ಟು ಟೊಮ್ಯಾಟೋ ಸಾಗಿಸುತ್ತಿದ್ದ ರೈತ, ಪೀಣ್ಯ ಬಳಿ ಬಂದಾಗ ಟೊಮ್ಯಾಟೊ ತುಂಬಿದ ಬೊಲೆರೋ ವಾಹನ ನಮ್ಮ ಕಾರ್​ಗೆ ಟಚ್ ಆಗಿದೆ ಎಂದು ಖ್ಯಾತೆ ತೆಗೆದ ದುಷ್ಕರ್ಮಿಗಳು ಗಾಡಿ ಸೈಡಿಗೆ ಹಾಕು ಎಂದು ರೈತನಿಗೆ ಅವಾಜ್ ಹಾಕಿ ನಂತರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಹಣ ಕೊಡು ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಇಲ್ಲ ಎಂದಾಗ ಮೊಬೈಲ್ ನಲ್ಲಿದ್ದ ಹಣವನ್ನು ಆನ್​ಲೈನ್​  ಟ್ರಾನ್ಸಫರ್ ಮಾಡಿಕೊಂಡಿದ್ದಾರೆ.

ನಂತರ ಟೊಮ್ಯಾಟೋ ತುಂಬಿದ್ದ ಗಾಡಿಯಲ್ಲಿ ರೈತನನ್ನ ಕೂರಿಸಿಕೊಂಡು ಕಿಡ್ನ್ಯಾಪ್ ಮಾಡಿದ ದುಷ್ಕರ್ಮಿಗಳು ಚಿಕ್ಕಜಾಲ ಬಳಿ ರೈತನನ್ನು ಬಿಟ್ಟು ಪರಾರಿಯಾಗಿದ್ದಾರೆ.

ಸದ್ಯ ಘಟನೆ ಸಂಬಂಧ ಆರ್ ಎಮ್ ಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

 

Exit mobile version