Site icon PowerTV

ಜೈನ ಮುನಿಗಳ ಹತ್ಯೆಯನ್ನ ಸಿಬಿಐಗೆ ಒಪ್ಪಿಸಬೇಕು : ಬಿಜೆಪಿ ಶಾಸಕ ಯತ್ನಾಳ್

ಬೆಂಗಳೂರು: ಜೈನ ಮುನಿಗಳು ಬಟ್ಟೆಯನ್ನೂ ತ್ಯಾಗ ಮಾಡ್ತಾರೆ.ಅಂದ್ರೆ ಮುನಿಗಳು,ಸಂತರಿಗೆ ಇವತ್ತು ರಕ್ಷಣೆ ಸಿಗ್ತಿಲ್ಲ ಎಲ್ಲಾವನ್ನು ಹಣಕಾಸು‌ ನೆಪವೊಡ್ಡಿ ಕೇಸ್​ನ್ನು ಮುಚ್ಚಿಹಾಕ್ತಾರೆ ಎಂದು ವಿದಾನಸಭೆ ಕಲಾಪದಲ್ಲಿ ಆರೋಪಿಸಿದರು.

ಜೈನ ಮುನಿ ಹತ್ಯೆ ಪ್ರಕರಣದ ವಿಚಾರವಾಗಿ ಅಧಿವೇಶದಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ಇದು ಕರ್ನಾಟಕಕ್ಕೆ ಕಳಂಕ ತರುವ ಸಂಗತಿ. ಮುನಿಗಳಿಗೆ ಸಂತರಿಗೆ ರಕ್ಷಣೆ ಇಲ್ಲದಿದ್ದರೆ ಹೇಗೆ? ಹಣಕಾಸು ವ್ಯವಹಾರ ಎಂಬುವುದು ಒತ್ತಡದಿಂದ ಪೊಲೀಸರು ಸೃಷ್ಟಿ ಮಾಡಿದ್ದಾರೆ.ಈಗ ಭಯದ ವಾತಾವರಣ ರಾಜ್ಯದಲ್ಲಿ ನಿರ್ಮಾಣ ಆಗಿದೆ ಎಂದಿದ್ದಾರೆ.

ಇದನ್ನೂ ಓದಿ: ಮಾನಸಿಕ ಖಿನ್ನತೆಯಿಂದ ಮನನೊಂದು ನದಿಗೆ ಹಾರಿ ಸ್ವಾಮೀಜಿ ಆತ್ಮಹತ್ಯೆ

ಇನ್ನೂಪ್ರಕರಣದ ಬಗ್ಗೆ  ಮುಂಜಾನೆ ಪೊಲೀಸರು‌ ಚೆನ್ನಾಗಿ ಮಾತನಾಡ್ತಾರೆ ಅಂದ್ರೆ ಬೆಂಗಳೂರಿನಿಂದ ಒತ್ತಡ ಬರುತ್ತಲೇ ಸೈಲೆಂಟ್​ ಆಗ್ತಾರೆ. ನನಗೂ ಇಂತಹ ಅನುಭವ ಆಗಿದೆ ಎಂದು ಕಿಡಿಕಾರಿದ್ದಾರೆ.

Exit mobile version