Site icon PowerTV

ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ನಿಗೂಢ ಸ್ಪೋಟ: ಗಂಭೀರ ಗಾಯ

ಬೆಂಗಳೂರು : ಕಟ್ಟಡ ನಿರ್ಮಾಣ ಕಾಮಗಾರಿ  ವೇಳೆ ನಿಗೂಢ ಸ್ಪೋಟಗೊಂಡು ಮೂವರು ಕೂಲಿ ಕಾರ್ಮಿಕರಿಗೆ ಗಂಭೀರ ಗಾಯವಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ಚಾಕು ಹಿಡಿದು ವಿಧಾನಸೌಧಕ್ಕೆ ಆಗಮಿಸಿದ ಮಹಿಳೆ

ಜೂನ್ 6ರ ರಾತ್ರಿ 11:30 ರ ವೇಳೆಗೆ ನಿಗೂಢ ಸ್ಪೋಟಗೊಂಡಿದ್ದು ಗಾಯಾಳುಗಳನ್ನು ಶ್ರೀನಿವಾಸ್, ಮಣಿಕಂಠ, ಶಶಿಕುಮಾರ್ ಎಂದು ಗುರುತಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಕಾರ್ಮಿಕರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಆಸ್ಪತ್ರೆ ಬಳಿ ಮುಗಿಲು ಮುಟ್ಟಿದ ಕುಟುಂಬ ಸದಸ್ಯರ ಆಕ್ರಂದನ.

ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version