Site icon PowerTV

ಶಿವಾಜಿನಗರ: ಹುಸಿಬಾಂಬ್​ ಕರೆ ಆರೋಪಿ ಬಂಧನ

ಬೆಂಗಳೂರು: ಶಿವಾಜಿನಗರದ  ಮಸೀದಿಯಲ್ಲಿ ಬಾಂಬ್ ಇದೆ ಎಂದು ಹುಸಿ ಕರೆಮಾಡಿ ಹೆದರಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಅಕ್ಕಿ ಜೊತೆ ‘ಹಣ’ಭಾಗ್ಯ

ಮಹಾರಾಷ್ಟ್ರ ಮೂಲದ ಸೈಯದ್ ಖಾಜಿ ಮಹಮದ್ ಅನ್ವರ್ ಉಲ್ಲಾ (37) ಬಂಧಿತ ಆರೋಪಿ. ಮದಾರಸ ಹೆಸರಿನಲ್ಲಿ ಮಸೀದಿಗಳ ಬಳಿ ಚಂದಾ ಕೇಳಿ ವಿವಿಧ ರಾಜ್ಯಗಳನ್ನು ತಿರುಗುವುದೇ ಇವನ ವೃತ್ತಿ, ರಾತ್ರಿ ಮಸೀದಿಯಲ್ಲಿ ಮಲಗಲು ಬಿಡಲಿಲ್ಲ ಎನ್ನುವ ಕಾರಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ.

ಜುಲೈ  4 ರಂದು ಬೆಂಗಳೂರಿಗೆ ಬಂದಿದ್ದ ಆರೋಪಿ, ಶಿವಾಜಿನಗರದ ರಸೆಲ್ ಮಾರ್ಕೆಟ್ ಹಿಂದಿರುವ ಆಜಾಂ ಮಸೀದಿಗೆ ಚಂದ ಕೇಳಿ ಬಳಿಕ ರಾತ್ರಿ ಉಳಿದು ಕೊಳ್ಳಲು ಮುಂದಾಗಿದ್ದ. ಆಗ ಮಸೀದಿಯಲ್ಲಿ ಯಾರನ್ನು ಉಳಿಸಿಕೊಳ್ಳುವ ಪದ್ಧತಿ ಇಲ್ಲ ಎಂದು ಹೇಳಿದ ಇಲ್ಲಿನ ಸಿಬ್ಬಂದಿ ಮಸೀದಿಯಿಂದ ಆತನ ಕಳುಹಿಸಿದ್ದರು.

ಇದೇ ಬೇಸರದಲ್ಲಿ ಮಸೀದಿಯಿಂದ ರಾತ್ರಿ 9.30ಕ್ಕೆ  ಮೆಜೆಸ್ಟಿಕ್ ನಿಂದ ಕರ್ನೂಲ್ ಬಸ್ ಹತ್ತಿ ಬಳಿಕ ದೇವನಹಳ್ಳಿ ದಾಟುತಿದ್ದಂತೆ ಕಟ್ರೋಲ್ ನಂಬರ್ 100ಕ್ಕೆ ಕರೆ ಮಾಡಿದ್ದಈ ಕರೆಯು ಆಟೋ ಫಾರ್ವರ್ಡ್ ಮುಖಾಂತರ 112ಗೆ ಕನೆಕ್ಟ್ ಆಗಿತ್ತು ಈ ವೇಳೆ ಮಸೀದಿಯಲ್ಲಿ ಬಾಂಬ್ ಇರುವುದಾಗಿ ಹುಸಿಕರೆ ಮಾಡಿ ಹೇಳಿದ್ದ.

ಸದ್ಯ ಶಿವಾಜಿನಗರ ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

 

Exit mobile version