Site icon PowerTV

ನಾವು ಜೈನ ಮಂದಿರಕ್ಕೆ ರಕ್ಷಣೆ ಕೊಡುತ್ತೇವೆ : ಡಾ.ಜಿ ಪರಮೇಶ್ವರ

ಬೆಂಗಳೂರು : ನಾವು ಜೈನ ಮಂದಿರಕ್ಕೆ ರಕ್ಷಣೆ ಕೊಡುತ್ತೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು ಭರವಸೆ ನೀಡಿದರು.

ಜೈನಮುನಿ ಹತ್ಯೆ ಪ್ರಕರಣಕ್ಕೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸ್ವಾಮೀಜಿ ನಾಲ್ಕು ಬೇಡಿಕೆ ಇಟ್ಟಿದ್ದಾರೆ, ಅದಕ್ಕೆ ನಾವು ಸ್ಪಂದಿಸುತ್ತೇವೆ ಎಂದರು.

ಜೈನ ಸ್ವಾಮೀಜಿಗಳ ಯಾತ್ರೆ ವೇಳೆ ರಕ್ಷಣೆ ಕೊಡಬೇಕು. ಜೈನ ಮಂದಿರಗಳಿಗೆ ರಕ್ಷಣೆ ಕೊಡಬೇಕು ಎಂದು ತಿಳಿಸಿದ್ದಾರೆ. ಜೈನ ಸಮುದಾಯದ ಸಂಘ ಸಂಸ್ಥೆಗಳ ಲಿಖಿತ ರೂಪದಲ್ಲಿ ತಿಳಿಸಿದರೇ ನಾವು ರಕ್ಷಣೆ ಕೊಡುತ್ತೇವೆ ಎಂದರು ಹೇಳಿದರು.

ಇದನ್ನೂ ಓದಿ : ಶಾಲಾ ಮಕ್ಕಳ ಸಮವಸ್ತ್ರ : ಪೋಷಕರ ಜೆಬಿಗೆ ಬಿತ್ತು ಕತ್ತರಿ

ತಂಗುವ ಸ್ಥಳ ಅಧಿಕೃತ ಆಗಬೇಕು

ಅವರು ತಂಗುವ ಸ್ಥಳ ಅಧಿಕೃತ ಆಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಜೈನ ಸ್ವಾಮೀಜಿ ಶಾಲಾ ಕಾಲೇಜುಗಳಲ್ಲಿ ಉಳಿದುಕೊಳ್ಳುತ್ತಾರೆ. ಈ ವಿಚಾರವಾಗಿ ನಾನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಜೊತೆ ಮಾತಾಡುತ್ತೇನೆ ಎಂದು ಮಾಹಿತಿ ನೀಡಿದರು.

ಜೈನ ಸಮುದಾಯದ ಮಂಡಳಿ

ಜೈನ ಮಂಡಳಿ ಮಾಡಬೇಕು ಎಂದು ಹೇಳಿದ್ದಾರೆ. ಈಗಾಗಲೇ ಹಿಂದೂಳಿದ ವರ್ಗಗಳ ನಿಮಗ ಮಂಡಳಿ ಇದೆ. ಮುಖ್ಯಮಂತ್ರಿ ಗಮನಕ್ಕೆ ತಂದು ಜೈನ ಸಮುದಾಯದ ಮಂಡಳಿ ಮಾಡುವುದಕ್ಕೆ ಕ್ರಮ ಕೈಗೊಳ್ಳುತ್ತೇವೆ. ಬಜೆಟ್ ಮೊದಲೆ ಆಗಿದ್ದರೇ ನಾವು ಪ್ರಕಟಣೆ ಮಾಡುತ್ತಿದ್ದೆವು ಎಂದು ಪರಮೇಶ್ವರ್ ತಿಳಿಸಿದರು.

Exit mobile version