Site icon PowerTV

ಸಿಲಿಂಡರ್ ಸ್ಫೋಟ : ಅವಶೇಷಗಳಡಿ ಸಿಲುಕಿ ಓರ್ವನ ಸಾವು

ಬಾಗಲಕೋಟೆ : ಸಿಲಿಂಡರ್ ಸ್ಪೋಟಗೊಂಡು ಇಡೀ ಮನೆಯೇ ಧ್ವಂಸಗೊಂಡು ಅವಶೇಷಗಳಡಿ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. 

ಜಿಲ್ಲೆಯ ನಂದಿಕೇಶ್ವರ ಗ್ರಾಮದ ಆಶ್ರಯ ಕಾಲೋನಿಯಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ಮಂಜುನಾಥ್ ಪಡಿಯಪ್ಪ(35) ಮೃತಪಟ್ಟ ವ್ಯಕ್ತಿ. ತಡರಾತ್ರಿಯಲ್ಲಿ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಮಾನಸಿಕ ಖಿನ್ನತೆಯಿಂದ ಮನನೊಂದು ನದಿಗೆ ಹಾರಿ ಸ್ವಾಮೀಜಿ ಆತ್ಮಹತ್ಯೆ

ಮಂಜುನಾಥ್ ಅವರು ತಮ್ಮ ಪತ್ನಿ ಮತ್ತು ಮಕ್ಕಳ ಜೊತೆ ಭಟ್ಕಳದಲ್ಲಿ ವಾಸಿಸಿದ್ದರು. ಜಮೀನ ವಿಚಾರವಾಗಿ ವಿಚಾರಿಸಿಕೊಂಡು ಹೋಗಲು ಒಒ್ಬರೇ ನಂದಿಕೇಶ್ವರ ಗ್ರಾಮದ ಆಶ್ರಯ ಕಾಲೋನಿ ಬಂದಿದ್ದರು. ತಡವಾದ ಕಾರಣ ಅವರು ಅದೇ ಮನೆಯಲ್ಲಿ ಉಳಿದಿದ್ದರು. ಈ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.

Exit mobile version