Site icon PowerTV

ಬಿಜೆಪಿ ಷಡ್ಯಂತ್ರದ ವಿರುದ್ಧ ಕಾಂಗ್ರೆಸ್​ ಮೌನ ಪ್ರತಿಭಟನೆ : ಡಿಕೆ ಶಿವಕುಮಾರ್

ಬೆಂಗಳೂರು: ರಾಹುಲ್​ ಗಾಂಧಿ ಅನರ್ಹತೆ ಪ್ರಶ್ನಸಿ ಬಿಜೆಪಿಯ ವಿರೋಧಿಸಿ ಇದೇ ಜುಲೈ 12 ರಂದು ಫ್ರೀ ಡಂ ಪಾರ್ಕ್‍ನಲ್ಲಿ ಬಾಯಿಗೆ ಕಪ್ಪು ಬಟ್ಟೆಕಟ್ಟಿಕೊಂಡು ಮೌನ ಪ್ರತಿಭಟನೆ ಮಾಡುತ್ತೇವೆಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ  ಮಾತನಾಡಿದ ಡಿಕೆ ಶಿವಕುಮಾರ್ ನಮ್ಮ ನಾಯಕ ರಾಹುಲ್ ಗಾಂಧಿ ಅವರ ರಾಜಕೀಯ ಜೀವನ ಮುಗಿಸಲು ಬಿಜೆಪಿ ನಡೆಸುತ್ತಿರುವ ಷಡ್ಯಂತ್ರವನ್ನು ಖಂಡಿಸಿ ನಾವು ಈ ಪ್ರತಿಭಟನೆಯನ್ನು ಮಾಡುತ್ತೀದ್ದೇವೆ ಎಂದು ಹೇಳಿದ್ದರು.ಇನ್ನೂ ಇಡೀ ಕರ್ನಾಟಕ ಕಾಂಗ್ರೆಸ್ ರಾಹುಲ್ ಗಾಂಧಿ ಅವರ ಪರವಾಗಿ ಜುಲೈ 12 ರಂದು ಬೆಳಗ್ಗೆ 10ಗಂಟೆಗೆ ಹೋರಾಟ ಮಾಡುತ್ತದೆ ಎಂದರು.

ರಾಹುಲ್​ ಗಾಂಧಿ ಅನರ್ಹತೆಗೆ ಕಾರಣ

‘ರಾಹುಲ್ ಗಾಂಧಿ ಅವರು ಎಂದಿಗೂ ದೇಶದ ಸ್ವಾಭಿಮಾನಕ್ಕೆ ಧಕ್ಕೆ ತಂದಿಲ್ಲ. ರಾಜ್ಯದಲ್ಲಿ ಅವರು ಮಾಡಿದ ಭಾಷಣವನ್ನೇ ಮುಂದಿಟ್ಟುಕೊಂಡು ರಾಜಕೀಯವಾಗಿ ಅವರನ್ನು ಮುಗಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಹೋರಾಟ ಮಾಡುತ್ತಿದ್ದಾರೆ.

ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಮೌನ ಪ್ರತಿಭಟನೆ ಯಲ್ಲಿ ಶಾಸಕರು, ಸಚಿವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರು ಸೇರಿದಂತೆ ಸಿಎಂ ಹಾಗೂ ನಾನು ಕೂಡ ಭಾಗವಹಿಸುತ್ತೇನೆ. ಎಲ್ಲಾರು ಬಂದು ಭಾಗವಹಿಸಬೇಕು ಎಂದರು.

 

Exit mobile version