Site icon PowerTV

ಕೊಡಲಿಯಿಂದ ಕೊಚ್ಚಿ ಪತ್ನಿಯನ್ನೇ ಕೊಂದ ಪತಿರಾಯ

ಹುಬ್ಬಳ್ಳಿ : ಮೊನ್ನೆಯಷ್ಟೇ ಪತಿರಾಯ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಪ್ರಕರಣ ಮಾಸುವ ಮುನ್ನವೇ ಮತ್ತೊಮ್ಮೆ ಇತಂಹದೇ  ಘಟನೆ ವಾಣಿಜ್ಯ ನಗರೀ ಹುಬ್ಬಳ್ಳಿ ನಡೆದಿದೆ.

ಹೌದು, ಪತಿಯೇ ಪತ್ನಿಯ ತಲೆಗೆ ಕೊಡಲಿಯಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಆನಂದನಗರದ ಬ್ಯಾಹಟ್ಟಿ ಪ್ಲಾಟ್ ನಲ್ಲಿಂದು ಇಂದು ಬೆಳ್ಳಂಬೆಳಿಗ್ಗೆ ನಡೆದಿದ್ದು, ಜನತೆ ಬೆಚ್ಚಿ ಬಿದ್ದಿದೆ.

ಘಟನೆಯ ಹಿನ್ನಲೆ:  

ಕೌಟುಂಬಿಕ ಕಲಹದಿಂದ ಭೀಮಪ್ಪ ಮುತ್ತಲಗಿ ಎಂಬಾತನೇ ತನ್ನ ಪತ್ನಿ ಮಂಜುಳಾಗೆ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.ಘಟನಾ ಸ್ಥಳಕ್ಕೆ ದಕ್ಷಿಣ ವಿಭಾಗ ಎಸಿಪಿ ಆರ್.ಕೆ.ಪಾಟೀಲ್, ಹಳೇ ಹುಬ್ಬಳ್ಳಿ ಠಾಣೆಯ ಇನ್ಸ್ಪೆಕ್ಟರ್ ಸುರೇಶ ಯಳ್ಳೂರ ಹಾಗೂ ಪಿಎಸ್ಐ ಬನ್ನಿಕೊಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ವೃದ್ಧೆ ಸಾವು ಪ್ರಕರಣ : ಕರ್ತವ್ಯ ಲೋಪ ಹಿನ್ನಲೆ ಎಇಇ ಸಸ್ಪೆಂಡ್

ಇನ್ನೂ ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಯು ಭೀತಿಗೊಂಡು ತಾನೇ ಪೊಲೀಸರಿಗೆ ಶರಣಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತಂತೆ ತನಿಖೆ ಮತಷ್ಟು ಚುರುಕುಗೊಂಡಿದೆ.

 

 

Exit mobile version