Site icon PowerTV

ಬಾಕಿ ವೇತನ ಬಿಡುಗಡೆ ಭರವಸೆ ನೀಡಿದ ಸಚಿವ ದಿನೇಶ್​ ಗುಂಡೂರಾವ್​: ನಾಳೆ ಮಹತ್ವದ ಸಭೆ

ಬೆಂಗಳೂರು : ಬಾಕಿ ವೇತನ ಪಾವತಿಗೆ ಆಗ್ರಹಿಸಿ ಮುಷ್ಕರ ನಡೆಸಲು ತೀರ್ಮಾನಿಸಿದ್ದ 108 ಆ್ಯಂಬುಲೆನ್ಸ್ ಸಿಬ್ಬಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್​, ಬಾಕಿ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು ಮುಷ್ಕರ ನಡೆಸದಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಇಂಧನ ಇಲಾಖೆಯ 800 ಕ್ಕೂ ಹೆಚ್ಚು ಸಿಬ್ಬಂದಿಗಳ ವರ್ಗಾವಣೆ: ಹೆಚ್​ಡಿಕೆ ಆರೋಪ ನಿಜಾನ?

ಸಚಿವರ ಸೂಚನೆ ಮೇರೆಗೆ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ 108 ಸಿಬ್ಬಂದಿ ಜೊತೆ ಸಭೆ ನಡೆಸಿದ್ದು ಮೊದಲ ಹಂತದಲ್ಲಿ ಬಾಕಿ ವೇತನದ 14 ಕೋಟಿ ಬಿಡುಗಡೆ ಮತ್ತು ಉಳಿದ ಕಂತು ಶೀಘ್ರದಲ್ಲಿ ಪಾವತಿಸುವ ಭರವಸೆ ನೀಡಲಾಗಿದೆ.

ಶೇ 15 ರಷ್ಟು ವೇತನ ಹೆಚ್ಚಳಕ್ಕೆ 108 ಸಿಬ್ಬಂದಿಗಳು ಬೇಡಿಕೆಯಿಟ್ಟದ್ದು, ವೇತನದ ವಿಚಾರವಾಗಿ ನಾಳೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಮತ್ತು​ ಅಧಿಕಾರಿಗಳ ಜೊತೆ ಸಭೆ ನಡೆಯಲಿದೆ.

ಸೋಮವಾರ ನಡೆಯಲಿರುವ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ 108 ಆ್ಯಂಬುಲೆನ್ಸ್​ಗಳು ರೋಡಿಗಿಳಿಯಲಿದೆಯಾ ಅಥವಾ ಶೆಡ್ ಗಳಲ್ಲಿ ನಿಲ್ಲಲಿದೆಯಾ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ.

Exit mobile version