Site icon PowerTV

ಇಂದಿರ ಕ್ಯಾಂಟೀನ್​ನಲ್ಲಿ ಹೆಚ್ಚುವರಿ ಹಣ ವಸೂಲಿ ಆರೋಪ:ಅಧಿಕಾರಿಗಳಿಗೆ ಡಿಕೆಶಿ ಖಡಕ್ ಎಚ್ಚರಿಕೆ

ಬೆಂಗಳೂರು : ದಾಸರಹಳ್ಳಿಯ ಇಂದಿರಾ ಕ್ಯಾಂಟೀನ್​ನಲ್ಲಿ ಬೆಳಗ್ಗಿನ ಉಪಹಾರಕ್ಕೆ ಹೆಚ್ಚುವರಿ 5 ರೂ.ಸುಲಿಗೆ ಮಾಡುತ್ತಿರುವ ಆರೋಪ ಡಿಕೆ ಶಿವಕುಮಾರ್ ಭೇಟಿ ವೇಳೆ ಕೇಳಿಬಂದಿದೆ.

ಇದನ್ನೂ ಓದಿ: 15 ಮದುವೆಯಾಗಿ ಮಹಿಳೆಯರನ್ನು ವಂಚಿಸುತ್ತಿದ್ದ ಭೂಪ; ಪೋಲಿಸ್​​ ಬಲೆಗೆ

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂದು ದಾಸರಹಳ್ಳಿ ಇಂದಿರಾ ಕ್ಯಾಂಟೀನ್​ಗೆ ಭೇಟಿ ನೀಡಿ ಕ್ಯಾಂಟೀನ್​ ನಿರ್ವಹಣೆ ಮತ್ತು ಶುಚಿತ್ವವನ್ನು ಸ್ವತ: ತಿಂಡಿ ಸೇವಿಸಿ ಪರಿಶೀಲನೆ ನಡೆಸಿದರು ಈ ವೇಳೆ​  ತಿಂಡಿ ಮಾಡಲು ಬಂದ ವ್ಯಕ್ತಿ ಬೆಳಗಿನ ಉಪಹಾರಕ್ಕೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಡಿಕೆಶಿಗೆ ದೂರು ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೇ ನೀಡಿದ ಅವರು, ಯಾಕೆ ಅವ್ರು 10 ರೂ. ಪಡೆದ್ರು, ಐದು ರೂಪಾಯಿ ಪಡೆಯಬೇಕಲ್ವೆ? ಎಂದು ಹೇಳಿ ಉಪಹಾರ ಸೇವನೆ ಮಾಡುತ್ತಲೇ ಕ್ವಾಲಿಟಿ ಕಂಟ್ರೋಲ್ ಮೊಬೈಲ್ ನಂಬರ್ ಗೆ ಕರೆ ಮಾಡಿದ್ದಾರೆ. ಆದರೇ, ಕನೆಕ್ಟ್ ಆಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ.

Exit mobile version