Site icon PowerTV

ಇದೊಂದು ಜನ ವಿರೋಧಿ ಬಜೆಟ್​ : ಬಸವರಾಜ ಬೊಮ್ಮಾಯಿ ಕಿಡಿ

ಬೆಂಗಳೂರು:ರಾಜ್ಯ ಸರ್ಕಾರ  ಗ್ಯಾರಂಟಿಗಾಗಿ ಸಾಲ ಮಾಡಿದ್ದಾರೆ. ಇದೊಂದು ಜನ ವಿರೋಧಿ ಬಜೆಟ್​ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

ಹೌದು, ನಿನ್ನೆ ನಡೆದ ರಾಜ್ಯ ಬಜೆಟ್​ನಲ್ಲಿ ಮಾನ್ಯ ಸಿದ್ದರಾಮಯ್ಯನವರು ಜನತೆಯ ಮೇಲೆ 388,000 ಕೋಟಿ ಹೊರೆ ಹೊರಿಸಿದ್ದಾರೆ. ಇವರ ಭರವಸೆಯ ಯೋಜನೆಯ ಜಾರಿಗಾಗಿ ಜನ ಸಾಮಾನ್ಯರು ಹೊರೆಯನ್ನು ಹೊರಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಕೈ ಪಡೆಯ ಮೇಲೆ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್‌ : ಒಂದು ತಿಂಗಳು ಸಂಚಾರ ಸ್ಥಗಿತ

ನಮ್ಮ ಕಾಲದಲ್ಲಿ  ಕೋವಿಡ್, ಲಾಕ್‌ಡ್‌ನ್‌ ಕಾರಣಕ್ಕಾಗಿ ಸಾಲ ಮಾಡಬೇಕಾಗಿತ್ತು. ಆ ಬಳಿಕ ಆರ್ಥಿಕ ಸ್ಥಿತಿ ಸರಿಯಿತ್ತು. ಆದರೆ, ಇವರು ಗ್ಯಾರಂಟಿಗಾಗಿ ಸಾಲ ಮಾಡಿದ್ದಾರೆ.ಇನ್ನು ಬಜೆಟ್ ಗಾತ್ರ 33.27 ಲಕ್ಷ ಕೋಟಿ ಮಾಡಿದ್ದರೂ ಶಿಕ್ಷಣ, ಆರೋಗ್ಯ,ಕೃಷಿ, ಲೋಕೋಪಯೋಗಿ, ಯೋಜನೆಗಳಿಗೆ ಅನುದಾನ ಪ್ರಮಾಣ ಕಡಿಮೆ ಮಾಡಿದ್ದಾರೆ.

ಸಿದ್ದರಾಮಯ್ಯ ವಾಸ್ತವ ಮರೆ ಮಾಚುವ ಕೆಲಸ ಮಾಡಿದ್ದಾರೆ. ಇದೊಂದು ಜನ ವಿರೋಧಿ, ಅಭಿವೃದ್ಧಿ ಮಾರಕ ಬಜೆಟ್‌  ಎಂದು ಕಿಡಿಕಾರಿದ್ದಾರೆ.

Exit mobile version