Site icon PowerTV

10 ಕೋಟಿ ತಲುಪಿದ ಸಲಾರ್ ಟೀಸರ್ : ಫ್ಯಾನ್ಸ್​ಗೆ ಪತ್ರ ಬರೆದ ‘ಹೊಂಬಾಳೆ ಫಿಲ್ಮ್ಸ್‌’

ಬೆಂಗಳೂರು: ಎರಡು ದಿನಗಳ ಹಿಂದೆ ಬಿಡುಗಡೆಯಾದ ‘ಸಲಾರ್’ ಟೀಸರ್ ಸಿನಿಮಾದ ಟೀಸರ್ ಬಿಡುಗಡೆ ಆಗಿ ಸಖತ್ ಸದ್ದು ಮಾಡಿ ಹತ್ತು ಕೋಟಿಗೂ ಹೆಚ್ಚಿನ ವೀವ್ಸ್ ಪಡೆದು ದಾಖಲೆಯನ್ನು ಬರೆದಿದೆ.

ಹೌದು, ಈ ಹಿಂದಿನ ಎಲ್ಲಾ ಸಿನಿಮಾ ಟೀಸರ್‌ಗಳ ದಾಖಲೆ ಅಳಿಸಿ ಹೊಸ ದಾಖಲೆಯನ್ನು ಸಲಾರ್​ ಸೃಷ್ಟಿಸಿದೆ.10 ಕೋಟಿಗೂ ಹೆಚ್ಚಿನ  ವೀವ್ಸ್ ಸಾಧಿಸಿ ಎಲ್ಲರ ಗಮನವನ್ನು ‘ಸಲಾರ್’ ಟೀಸರ್ ಸಳೆದಿದೆ.

24 ಗಂಟೆಗಳಲ್ಲಿ 83 ಮಿಲಿಯನ್ ವೀವ್ಸ್ ಸಾಧಿಸಿದ್ದ ಆಕ್ಷನ್ ಪ್ಯಾಕ್ಡ್ ಟೀಸರ್ 52 ಗಂಟೆಗಳಲ್ಲಿ 100 ಮಿಲಿಯನ್ ಗಡಿ ದಾಟಿದೆ. ‘ಸಲಾರ್’ ಟೀಸರ್‌ಗೆ ಸಿಕ್ಕ ರೆಸ್ಪಾನ್ಸ್‌ಗೆ ಚಿತ್ರತಂಡ ಖುಷಿಯಾಗಿದೆ. ಇದೀಗ ಅಭಿಮಾನಿಗಳಿಗೆ ಹೊಂಬಾಳೆ ಸಂಸ್ಥೆ ಧನ್ಯವಾದ ತಿಳಿಸುವುದರ ಜೊತೆಗೆ ಟ್ರೈಲರ್ ರಿಲೀಸ್ ಡೇಟ್ ಘೋಷಿಸಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.

ಇದನ್ನೂ ಓದಿ: ಬ್ರಾಹ್ಮಿ ಮುಹೂರ್ತದಲ್ಲಿ ಬಿಡುಗಡೆಯಾಯ್ತು ‘ಸಲಾರ್’ ಮೂವಿ ಟೀಸರ್

“ಹೃದಯ ತುಂಬಿದ ಧನ್ಯವಾದಗಳು.. ತಮ್ಮೆಲ್ಲರ ಪ್ರೀತಿಯ ಅಭಿಮಾನದ ಪ್ರೋತ್ಸಾಹಕ್ಕೆ ನಾವು ಆಭಾರಿ. ಭಾರತೀಯ ಸಿನಿಮಾ ಸಾಮರ್ಥ್ಯದ ಸಂಕೇತವಾಗಿ ಹೊರಹೊಮ್ಮಿರುವ ‘ಸಲಾರ್’ ಕ್ರಾಂತಿಗೆ ಮುನ್ನುಡಿಯಾಗಿ ಚಿತ್ರಪ್ರೇಮಿಗಳಿಂದ ದೊರಕಿದ ಪ್ರೀತಿಪೂರ್ವಕ ಬೆಂಬಲದಿಂದ ನಮ್ಮ ಮನತುಂಬಿದೆ. ಭಾರತೀಯ ಚಿತ್ರ ‘ಸಲಾರ್’ ಸಿನಿಮಾ ಟೀಸರ್ 10 ಕೋಟಿ ಚಿತ್ರರಸಿಕರನ್ನು ತಲುಪಿ ಭಾರತೀಯ ಸಿನಿಮಾರಂಗದಲ್ಲಿ ಹೊಸ ದಾಖಲೆ ಬರೆದಿದೆ. ನಿಮ್ಮ ಅಭಿಮಾನದ ಬೆಂಬಲಕ್ಕೆ ನಾವು ಸದಾ ಋಣಿಗಳು. ನಿಮ್ಮ ಅಚಲ ಬೆಂಬಲವು ನಮ್ಮ ಆಸಕ್ತಿಗೆ ಚೈತನ್ಯ ತುಂಬಿ ಅಸಾಧಾರಣವಾದುದನ್ನು ಪ್ರೇಕ್ಷಕರ ಮುಂದಿಡಲು ಪ್ರೇರೇಪಿಸುತ್ತಿದೆ. ಎಂದು ಟ್ವೀಟ್ ಮಾಡಿದ್ದಾರೆ.

ಸಲಾರ್ ಸಿನಿಮಾದ ಟ್ರೈಲರ್ ಆಗಸ್ಟ್​ ತಿಂಗಳಲ್ಲಿ ಬಿಡುಗಡೆ ಆಗಲಿರುವುದನ್ನು ಹೊಂಬಾಳೆ ಖಾತ್ರಿಪಡಿಸಿದೆ. ಟ್ರೈಲರ್ ಬಿಡುಗಡೆ ಆದ ಕೆಲವು ದಿನಗಳಲ್ಲಿ ಅಂದರೆ ಸೆಪ್ಟೆಂಬರ್ 28 ಕ್ಕೆ ಸಲಾರ್ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಸಲಾರ್​ನ ಮೊದಲ ಭಾಗವಷ್ಟೆ ಸೆಪ್ಟೆಂಬರ್ 28ಕ್ಕೆ ಬಿಡುಗಡೆ ಆಗಲಿದ್ದು, ಸಲಾರ್​ನ ಎರಡನೇ ಭಾಗದ ಬಿಡುಗಡೆ ಯಾವಾಗ ಎಂಬ ಬಗ್ಗೆ ಚಿತ್ರತಂಡ ಮಾಹಿತಿ ನೀಡಿಲ್ಲ.

 

Exit mobile version