Site icon PowerTV

ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿಗರು ಅಪ್ರಬುದ್ಧರು : ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ : ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ಅಪ್ರಬುದ್ಧರಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕುಟುಕಿದರು.

ರಾಹುಲ್ ಗಾಂಧಿಗೆ ಕೋರ್ಟ್ ನಲ್ಲಿ ಮತ್ತೊಂದು ಹಿನ್ನಡೆ ವಿಚಾರ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಟ್ರಯಲ್ ಕೋರ್ಟ್ ಶಿಕ್ಷೆ ನೀಡಿತ್ತು. ನಂತರ ಜಿಲ್ಲಾ ಮತ್ತು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು. ಆದರೆ, ಹೈಕೋರ್ಟ್ ಶಿಕ್ಷೆ ರದ್ದುಗೊಳಿಸಲು ನಿರಾಕರಣೆ ಮಾಡಿದೆ. ಆದರೆ, ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಇವರ ಹೋರಾಟ ಯಾರ ವಿರುದ್ಧ? ಹೈಕೋರ್ಟ್ ವಿರುದ್ಧನಾ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ‘ಕರ್ನಾಟಕದಲ್ಲಿ ದ್ವೇಷದ ಬಾಗಿಲು ಬಂದ್’ ಆಗಿದೆ : ರಾಹುಲ್ ಗಾಂಧಿ

ನಾನು ಅಂದದ್ದೆ ಸರಿ ಅನ್ನೋ ಹಠ

57ರಿಂದ 58 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಗೆ ಪ್ರಜ್ಞೆ ಇದ್ಯಾ? ಟ್ರಯಲ್ ಕೋರ್ಟ್ ನಲ್ಲಿ ಕ್ಷಮೆಯಾಚಿಸುವಂತೆ ಸಲಹೆ ಕೊಟ್ಟಾಗ ರಾಹುಲ್ ನಾನು ಅಂದದ್ದೆ ಸರಿ ಅಂತ ಸಮರ್ಥನೆ ಮಾಡಿದ್ದಾರೆ. ನನ್ನ ಹೇಳಿಕೆ ವಾಪಸ್ ಪಡೆಯಲ್ಲ ಅಂದ್ರು. ರಾಹುಲ್ ಗಾಂಧಿ ಅಪ್ರಬುದ್ಧತೆ ಮತ್ತು ಅಹಂಕಾರದಿಂದ ಆಗಿರುವಂತದ್ದು ಎಂದು ಛೇಡಿಸಿದರು.

ರಾಹುಲ್ ಗೆ ಬುದ್ದಿಮತ್ತೆ ಕಡಿಮೆಯಿದೆ

ಕಾಂಗ್ರೆಸ್ ನಾಯಕರು ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ಮೊದಲು ಹೋಗಿ ರಾಹುಲ್ ಗಾಂಧಿಗೆ ಬುದ್ಧಿ ಹೇಳಲಿ. ರಾಹುಲ್ ಗಾಂಧಿ ಬುದ್ದಿಮತ್ತೆ ಕಡಿಮೆಯಿದೆ. ಆದರೆ, ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವುದು ಅವರ ಮನಸ್ಥಿತಿ ತೋರಿಸುತ್ತದೆ ಎಂದು ಕುಟುಕಿದರು.

Exit mobile version