Site icon PowerTV

ಈಶ್ವರಪ್ಪ ಲೂಟಿ ಮಾಡಿ ಮಂತ್ರಿಗಿರಿ ಕಳೆದುಕೊಂಡರು : ಹೆಚ್. ವಿಶ್ವನಾಥ್ 

ಮೈಸೂರು : ಈಶ್ವರಪ್ಪ ಲೂಟಿ ಮಾಡಿ ಮಂತ್ರಿಗಿರಿ ಕಳೆದುಕೊಂಡರು ಎಂದು ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಗುಡುಗಿದರು.

ಹೊರಗಿನಿಂದ ಬಂದವರಿಂದ ಪಕ್ಷ ಹಾಳಾಗಿದೆ ಎಂಬ ಹೇಳಿಕೆ ಹಿಂಪಡೆದ ಈಶ್ವರಪ್ಪ ನಡೆ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಳಾದವರು 17 ಜನರು, ಸುಖ ಪಟ್ಟವರು ಅವರು ಎಂದು ಕುಟುಕಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪೆನ್ ಡ್ರೈವ್ ಆರೋಪ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಒಬ್ಬ ಹಿರಿಯ ನಾಯಕ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು ಹಾಗೂ ಮಾಜಿ ಪ್ರಧಾನಿಗಳ ಮಗ. ಅವರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಬೇಸರಿಸಿದರು.

ಇದನ್ನೂ ಓದಿ : ಇದೊಂದು ಜನ ವಿರೋಧಿ ಬಜೆಟ್​ : ಬಸವರಾಜ ಬೊಮ್ಮಾಯಿ ಕಿಡಿ

ಹೆಚ್​ಡಿಕೆ ಮಿಮಿಕ್ರಿ ಮಾಡ್ತಿದ್ದಾರೆ

ಕುಮಾರಸ್ವಾಮಿ ಅವರ ಬಳಿ ದಾಖಲೆ ಇದ್ದರೆ ತೋರಿಸಲಿ. ಇದು ಒಂತರ ಬ್ಲಾಕ್ ಮೇಲ್ ತಂತ್ರ. ಪೆನ್ ಡ್ರೈವ್ ತೋರಿಸಿ ಜೇಬಿನಲ್ಲಿ ಇಟ್ಟುಕೊಳ್ಳುವುದು ಶೋಭೆ ತರುವುದಿಲ್ಲ. ಇದು ಒಂಥರ ಮಿಮಿಕ್ರಿ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

ಬಿಜೆಪಿ ಹಾಗೂ ಜೆಡಿಎಸ್ ಲೋಕಸಭಾ ಚುನಾವಣೆಗೆ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಯಡಿಯೂರಪ್ಪನವರು ಶಹಬ್ಬಾಸ್ ಕುಮಾರಸ್ವಾಮಿ ಅಂತ ಹೇಳಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯನ್ನು ಎರಡು ಪಕ್ಷಗಳು ಒಟ್ಟಾಗಿ ಎದುರಿಸುತ್ತವೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

Exit mobile version