Site icon PowerTV

ವಿಪಕ್ಷ ನಾಯಕನ ಆಯ್ಕೆ ವಿಳಂಬದಿಂದ ಪಕ್ಷಕ್ಕೆ ಮುಜುಗರ : ಬೇಸರ ಹೊರಹಾಕಿದ ರವಿಕುಮಾರ್

ಬೆಂಗಳೂರು : ವಿಪಕ್ಷ ನಾಯನ ಆಯ್ಕೆಯಾಗದೆ ಇರೋದಕ್ಕೆ ಹೈಕಮಾಂಡ್ ಮೇಲೆ ಕೊನೆಗೂ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ವಿಳಂಬ ಆಗಿದೆ ನಿಜ. ವಿಪಕ್ಷ ನಾಯಕನ ಆಯ್ಕೆ ವಿಳಂಬದಿಂದ ಪಕ್ಷಕ್ಕೆ ಮುಜುಗರವಾಗಿದೆ ಎಂದರು.

ಈಗಾಗಲೇ ವಿಪಕ್ಷ ನಾಯಕನ ಆಯ್ಕೆ ಯಾಗಬೇಕಿತ್ತು. ಆದರೆ, ಪಕ್ಷದಿಂದ ಬೇರೆ ಏನೋ ಕಾರಣಕ್ಕೆ ಆಗಿಲ್ಲ. ಇನ್ನೂ ಎರಡು ದಿನಗಳಲ್ಲಿ ವಿಪಕ್ಷ ನಾಯಕನ ಆಯ್ಕೆ ಯಾಗುತ್ತದೆ. ಇಷ್ಟು ದಿನಗಳ ನೇಮಕ ವಿಳಂಬ ದಿಂದ ಮುಜುಗರ ಆಗುತ್ತಿದೆ. ಆದರೆ, ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುವಲ್ಲಿ ನಮ್ಮ ಪಕ್ಷ ಹಿಂದೆ ಸರಿದಿಲ್ಲ ಎಂದು ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದರು.

ಇದನ್ನೂ ಓದಿ : ವಿಪಕ್ಷ ನಾಯಕ ಸ್ಥಾನಕ್ಕೆ ಹೊಸಮುಖದ ಸುಳಿವು ನೀಡಿದ್ರಾ ಸಿ.ಟಿ ರವಿ?

ದ್ವೇಷದ ರಾಜಕಾರಣ ಮಾಡಿದ್ದಾರೆ

ಬಜೆಟ್ ನಲ್ಲಿ ಬಿಜೆಪಿ ಸರ್ಕಾರದ ಕಾರ್ಯಕ್ರಮ ಕೈ ಬಿಟ್ಟಿರೋ ವಿಚಾರ ಕುರಿತು ಮಾತನಾಡಿದ ಅವರು, ಇದೊಂದು ಬಡವರ ವಿರೋಧಿ ಸರ್ಕಾರ. ನಾವು ಬಡವರ ಪರ ಮಾಡಿದ ಕೆಲ‌ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಕೈ ಬಿಟ್ಟಿದೆ. ಸಿದ್ದರಾಮಯ್ಯ ದ್ವೇಷದ ರಾಜಕಾರಣವನ್ನು ಮಾಡಿದ್ದಾರೆ. ಇದೊಂದು ಸಾಲದ ಬಜೆಟ್ ಎಂದು ಟೀಕಿಸಿದರು.

ಜೈನ ಮುನಿ ಹತ್ಯೆ ಕುರಿತು ಮಾತನಾಡಿ, ಇವತ್ತು ಜೈನ ಮುನಿಗಳೊಬ್ಬರ ಹತ್ಯೆ ಆಗಿದೆ. ನಾಳೆ ಬಿಜೆಪಿ ನಿಯೋಗದಿಂದ ಅಲ್ಲಿಗೆ ಭೇಟಿ ಕೊಡುತ್ತಿದ್ದೇವೆ. ಬಿಜೆಪಿ ಪಕ್ಷ ರಾಜ್ಯದ ಜನರ ಪರ‌ ನಿಲ್ಲಲಿದೆ ಎಂದು ರವಿಕುಮಾರ್ ಹೇಳಿದರು.

Exit mobile version