Site icon PowerTV

ಕುಮಾರಸ್ವಾಮಿಗೆ ಯಾವುದೋ ಒಂದು ಪ್ರಕರಣ ಸಿಕ್ಕಿರಬಹುದು : HDK ಪರ ಜೋಶಿ ಬ್ಯಾಟಿಂಗ್

ಹುಬ್ಬಳ್ಳಿ : ಪೆನ್ ಡ್ರೈವ್ ಬಾಂಬ್ ಸಿಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಬ್ಯಾಟ್ ಬೀಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಗಾವಣೆ ವಿಚಾರದಲ್ಲಿ ಭಾರಿ ಅಕ್ರಮ ನಡೆಯುತ್ತಿದೆ ಎಂದರು.

ಹೆಚ್.ಡಿ ಕುಮಾರಸ್ವಾಮಿಗೆ ಯಾವುದೋ ಒಂದು ಪ್ರಕರಣ ಸಿಕ್ಕಿರಬಹುದು. ಹೀಗಾಗಿ, ಅವರು ಹಾಗೆ ಹೇಳಿಕೆ ನೀಡುತ್ತಿರಬಹುದು. ಹರಾಜು ರೀತಿಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಯುತಿದೆ. ಪ್ರಮುಖ ಹುದ್ದೆಗಳಿಗೆ ಆಕ್ಷನ್ ರೀತಿಯಲ್ಲಿ ವ್ಯವಹಾರ ನಡೆಯುತ್ತಿದೆ. ಇದು ಎಲ್ಲೋ ಒಂದು ಕಡೆ ಹೊರಗೆ ಬರುತ್ತದೆ ಎಂದು ಹೇಳಿದರು.

ಇದನ್ನೂ ಓದಿ : ಕುಮಾರಸ್ವಾಮಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಚಲುವರಾಯಸ್ವಾಮಿ

ಇಂದು ವಿಪಕ್ಷ ನಾಯಕರ ನಿರ್ಧಾರ

ಕುಮಾರಸ್ವಾಮಿ ಅವರು ಅಧಿಕೃತ ವಿಪಕ್ಷನಾಯಕನ ರೀತಿ ಕೆಲಸ ಮಾಡುತ್ತಿದ್ದಾರೆ ಎಂಬ ವಿಚಾರ ಕುರಿತು ಮಾತನಾಡಿ, ಅವರು ಜೆಡಿಎಸ್ ಪಕ್ಷದ ನಾಯಕರಾಗಿ ಕೆಲಸ ಮಾಡುತ್ತಾರೆ. ಇಂದು ನಮ್ಮ ವಿರೋಧ ಪಕ್ಷದ ನಾಯಕರ ನಿರ್ಧಾರವಾಗುತ್ತದೆ ಎಂದು ತಿಳಿಸಿದರು.

ವರ್ಗಾವಣೆ ಅಂದರೆ ದಂಧೆಯಲ್ಲ

ವರ್ಗಾವಣೆಯಾಗುತ್ತಿದೆ ಅಂದರೆ ದಂಧೆಯಲ್ಲ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ. ಮೈಸೂರಿನಲ್ಲಿ  ಮಾತನಾಡಿ, ಕುಮಾರಸ್ವಾಮಿ ಅವರ ಸರ್ಕಾರವಿದ್ದಾಗ ವರ್ಗಾವಣೆ ಆಗಿರಲಿಲ್ವಾ? ಎಲ್ಲಾ ಕಾಲಕ್ಕೂ ವರ್ಗಾವಣೆ ನಡೆಯುತ್ತದೆ. ಅದನ್ನು ದಂಧೆ ಅನ್ನೋದು ತಪ್ಪು ಎಂದು ಹೇಳಿದರು.

Exit mobile version