Site icon PowerTV

ವಿಪಕ್ಷ ನಾಯಕನ ಸ್ಥಾನಕ್ಕೆ ನೂರಾರು ಕೋಟಿ ಫಿಕ್ಸ್ ಮಾಡಿರಬಹುದು : ಎಂ.ಬಿ ಪಾಟೀಲ್ ಹೊಸ ಬಾಂಬ್

ವಿಜಯಪುರ : ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ನೂರಾರು ಕೋಟಿ ಫಿಕ್ಸ್ ಮಾಡಿರಬಹುದು ಎಂದು ಸಚಿವ ಎಂ.ಬಿ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.

ವಿಪಕ್ಷ ನಾಯಕ ಆಯ್ಕೆ ವಿಳಂಬ ಕುರಿತು ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಸರಿ ಕಲಿಗಳಿಗೆ ಕೌಂಟರ್ ಕೊಟ್ಟಿದ್ದಾರೆ.

ವಿಪಕ್ಷ ನಾಯಕನ ಸ್ಥಾನ ಸೇಲ್​ಗೆ ಇಟ್ಟಿದ್ದಾರಾ ನೋಡಿ. ಮುಖ್ಯಮಂತ್ರಿ ಸ್ಥಾನವನ್ನು ಸೇಲ್​ಗೆ ಇಟ್ಟ ಹಾಗೆಯೇ ಬಿಜೆಪಿ ವಿರೋಧ ಪಕ್ಷದ ನಾಯಕನ ಸ್ಥಾನ ಮಾರಾಟಕ್ಕೆ ಇಟ್ಟಿದ್ದಾರಾ? ನೂರಾರು ಕೋಟಿ ಫಿಕ್ಸ್ ಮಾಡಿದ್ದಾರಾ? ಯಾರಿಗೆ ಗೊತ್ತು ಎಂದು ಛೇಡಿಸಿದ್ದಾರೆ.

ಇದನ್ನೂ ಓದಿ : ಸಿಡಿ, ಪೆನ್ ಡ್ರೈವ್ ತೋರಿಸಲಿ.. ನಾವು ನೋಡ್ತೇವೆ : ಸುಮಲತಾ

ರಾಜ್ಯ ಬಜೆಟ್ ಹಾಗೂ ಗ್ಯಾರಂಟಿ ಯೋಜನೆಗಳ ಬಗ್ಗೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕೆ ಕುರಿತು ಮಾತನಾಡಿದ ಎಂಬಿಪಿ, ಜೋಶಿ ಅವರು ಹೊಟ್ಟೆ ಉರಿಯಿಂದ ಮಾತನಾಡಿರಬಹುದು. ಪ್ರಲ್ಹಾದ್ ಜೋಶಿ ಕೇಂದ್ರ ಸಚಿವರು, ಬಹಳ ತಿಳಿದುಕೊಂಡವರು. ಹೀಗೆ ಮಾತನಾಡಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಹ್ಲಾದ್ ಜೋಶಿಯವರಿಗೆ ಬಡವರ ಬಗ್ಗೆ ಗೊತ್ತಿಲ್ಲ. ಉಚಿತ ಭಾಗ್ಯಗಳನ್ನು ನಾವು ಶ್ರೀಮಂತರಿಗೆ ಕೊಡುತ್ತಿಲ್ಲ. ಅನ್ನಭಾಗ್ಯ, ಉಚಿತ ಬಸ್ ಪ್ರಯಾಣ, 200 ಯುನಿಟ್ ವಿದ್ಯುತ್, ಯುವನಿಧಿ ಏನು ಶ್ರೀಮಂತರಿಗಾ? ಎಂದು ಎಂ.ಬಿ ಪಾಟೀಲ್ ಗರಂ ಆದರು.

Exit mobile version