Site icon PowerTV

Be Careful..! : ಬಿಜೆಪಿಯವರ ಜೊತೆ ಹುಷಾರಾಗಿರಿ : ಸಿದ್ದರಾಮಯ್ಯ ಎಚ್ಚರಿಕೆ

ಬೆಂಗಳೂರು : ಬಿಜೆಪಿಯವರ ಜೊತೆ ಎಲ್ಲ ಹುಷಾರಾಗಿರಿ. ಸುಮ್ಮನೆ ತಪ್ಪುದಾರಿ ಹಿಡಿಸ್ತಾರೆ ಬಿಜೆಪಿಯವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.

ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪ್ರಬುದ್ಧ ಕರ್ನಾಟಕ ಜನಮನ ಸಮಾವೇಶ ಹಾಗೂ ಸಿಎಂ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

70 ಯೂನಿಟ್ ಬಳಕೆ ಮಾಡುವವನಿಗೆ 200 ಯುನಿಟ್ ಫ್ರೀ ಮಾಡುವಂತೆ ಹೇಳ್ತಾರೆ. 200 ಯುನಿಟ್ ಬಳಕೆ ಮಾಡದವರಿಗೆ 200 ಫ್ರೀ ಕೊಡೋಕೆ ಆಗುತ್ತಾ? ಕರೆಂಟ್ ವಿಚಾರವಾಗಿ ನಿಮಗೆಲ್ಲ ಬಿಜೆಪಿಯವರು ತಪ್ಪುದಾರಿ ಹಿಡಿಸುತ್ತಿದ್ದಾರೆ ಎಂದು ಎಚ್ಚರಿಕೆ ಸಂದೇಶ ನೀಡಿದರು.

ಇದನ್ನೂ ಓದಿ : ಬಡವರ ಬಾಳಿಕೆ ಕೊಳ್ಳಿ ಇಟ್ಟ ಬಜೆಟ್ : ಪ್ರಲ್ಹಾದ್ ಜೋಶಿ

ಹೆಬ್ಬೆಟ್ಟು ಹೊತ್ತೋನು ನಿಲ್ಲಬಹುದು

ಕೋಮು ಸಂಘರ್ಷ ಸೃಷಿಸುವವರನ್ನು ರಾಜಕೀಯವಾಗಿ ಅನರ್ಹಗೊಳಿಸಲು ಸಾಧ್ಯವೆ? ಎಂಬ ಪ್ರಶ್ನೆಗೆ, ಹೆಬ್ಬೆಟ್ಟು ಹೊತ್ತುವವನು, ಕ್ರಿಮಿನಲ್ ಕೇಸ್‌ ಇರುವವನು ಕೂಡ ಎಲೆಕ್ಷನ್‌ನಲ್ಲಿ ನಿಲ್ಲಬಹುದು. ಯಾವುದೇ ಅಪರಾಧ ಪ್ರಕರಣದಲ್ಲಿದ್ದರೂ ಕೂಡ ವ್ಯಕ್ತಿ ಚುನಾವಣೆಗೆ ನಿಲ್ಲಬಹುದು. ಅಪರಾಧಿ ಅಂತ ಆಗುವವರೆಗೂ ಚುನಾವಣೆಗೆ ನಿಲ್ಲಬಹುದು ಅಂತ ಇದೆ. ಕೋಮು ಸಂಘರ್ಷದಲ್ಲಿ ಭಾಗಿಯಾಗುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

‌‌ನಾಲ್ಕು ಬಾರಿ ನಾನು‌ ಸೋತಿದ್ದೇನೆ

ಇಂದು‌ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿರೋದು ನಿಮ್ಮ ಆಶಿರ್ವಾದದಿಂದ. ಸೋಲು-ಗೆಲುವು ರಾಜಕಾರಣದಲ್ಲಿ ಇರುತ್ತದೆ. ನಾನು ‌‌ನಾಲ್ಕು ಬಾರಿ‌ ಸೋತಿದ್ದೇನೆ. ಎರಡು ಬಾರಿ‌ ಮುಖ್ಯಮಂತ್ರಿ ಆಗಿದ್ದೇನೆ. ಉಮಾಪತಿ ಧೃತಿಗೆಡಬಾರದು ಎಂದು ವೇದಿಕೆ ಮೇಲೆ ಉಮಾಪತಿಗೆ ಸಿದ್ದರಾಮಯ್ಯ ಧೈರ್ಯ ತುಂಬಿದರು.

Exit mobile version