ಬೆಂಗಳೂರು : ಇಂದು ಮಂಡನೆಯಾಗಲಿರುವ ಬಜೆಟ್ ರಾಜ್ಯದ ಜನತೆಯ ಮೇಲೆ ಸಾಲ ಹೊರೆಸುವ ಮತ್ತು ಗೂಬೆ ಕೂರಿಸುವ ಕೆಲಸ ಎಂದು ಶಾಸಕ ಆರ್.ಅಶೋಕ್ ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಬಜೆಟ್ ಮೇಲೆ ರಾಜ್ಯದ ಜನತೆಯ ನಿರೀಕ್ಷೆಗಳೇನು? ಹೀಗಿದೆ ಪ್ರಾಂತ್ಯವಾರು ಮಾಹಿತಿ
ವಿಧಾನಸೌಧದ ಮುಂಭಾಗ ಮಾಧ್ಯಮದವರೊಂದಿಗೆ ಮಾತನಾಡಿದ ಅವರು , ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳಿಂದ ಸಾಲದ ಹೊರೆ ಮತ್ತಷ್ಟು ಹೆಚ್ಚಲಿದೆ, ಇಂದಿನ ಬಜೆಟ್ನಲ್ಲಿ ತೆರಿಗೆ ಹೆಚ್ಚಿಸಿ ಸಿದ್ದರಾಮಯ್ಯ ಜನರ ಮೇಲೆ ಗೂಬೆ ಕೂರಿಸೋ ಕೆಲಸ ಮಾಡಲಿದ್ದಾರೆ. ಪ್ರಗತಿದಾಯಕ ಬಜೆಟ್ ಎಂದು ಸಿಎಂ ಹೇಳಿದರೂ ಎಂಪಿ ಚುನಾವಣೆ ಮುಗಿಯೋವರೆಗೂ ಅನುದಾನ ಕೇಳಬೇಡಿ ಎನ್ನುತ್ತಿದ್ದಾರೆ.
ಪೊಳ್ಳು ಗ್ಯಾರಂಟಿ ಬಿಟ್ರೆ ಇಂದಿನ ಬಜೆಟ್ ನಲ್ಲಿ ಬೇರೇನು ಇಲ್ಲ, ಇಂದಿನ ಬಜೆಟ್ ಮಂಡನೆ ಬಳಿಕ ಸಿಎಂ ಸಿದ್ದರಾಮಯ್ಯ ಅವರ ಯೋಗ್ಯತೆ ಗೊತ್ತಾಗಲಿದೆ ಎಂದು ಹೇಳಿದ್ದಾರೆ.


