ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಚೌಕಾಸಿ ಮಾಡಿದ್ದಾರೆ : ಆರಗ ಜ್ಞಾನೇಂದ್ರ

ಬೆಂಗಳೂರು : ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಚೌಕಾಸಿ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಕಿಡಿಕಾರಿದರು.

ರಾಜ್ಯ ಬಜೆಟ್ ಕುರಿತು ಬೆಂಗಳೂರಿನಲ್ಲಿ ಪವರ್ ಟಿವಿ ಜೊತೆ ಮಾತನಾಡಿದ ಅವರು, ಬಜೆಟ್ ಪ್ರತಿಯಲ್ಲಿ ಹೆಚ್ಚು ಪುಟ ಇರುವುದೇ ವಿಶೇಷತೆ ಎಂದು ಕುಟುಕಿದರು.

ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಶಾಲೆ, ಪ್ರತ್ಯೇಕ ಯೋಜನೆ ಕೊಟ್ಟಿದ್ದಾರೆ. ಎಲ್ಲರೂ ಒಟ್ಟಾಗಿ ಇರಬೇಕು, ಇವ್ರು ಪ್ರತ್ಯೇಕ ಮಾಡಿದ್ದಾರೆ. ಸಮಾಜ ಹೊಡೆಯುವ ಯೋಜನೆ ಇದೆಲ್ಲ. ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಚೌಕಾಸಿ ಮಾಡಿದ್ದಾರೆ. ಬೇರೆಯವರಿಗೆಲ್ಲ ಜಾಸ್ತಿ ಯೋಜನೆ ಕೊಟ್ಟಿದ್ದಾರೆ ಎಂದು ಗುಡುಗಿದರು.

ಇದನ್ನೂ ಓದಿ : ಬೊಮ್ಮಾಯಿ ಮಂಡಿಸಿದ್ದ ಬಜೆಟ್‌ಗೆ ಒಂದು ರೂಪ ಕೊಟ್ಟಿದ್ದೇವೆ : ಡಿ.ಕೆ ಶಿವಕುಮಾರ್

ಬಿಜೆಪಿ ಟೀಕಿಸುವ ಬಜೆಟ್

ಹಿಂದಿನ ಸರ್ಕಾರವನ್ನು ಟೀಕಿಸಿದ್ದಾರೆ ಅಷ್ಟೆ. ಕುತೂಹಲಕ್ಕೆ ಸರಿಯಾದ ಬಜೆಟ್ ಅಲ್ಲ. ಕೇಂದ್ರ ಸರ್ಕಾರದ ಯೋಜನೆಗಳನ್ನು ಹೇಳಿದ್ದಾರೆ. ಎನ್ ಇಪಿ ಕೂಡ ರದ್ದು ಮಾಡಿಬಿಟ್ಟಿದ್ದಾರೆ. ಬಿಜೆಪಿಯನ್ನು ಟೀಕಿಸಲು ಬಜೆಟ್ ಅನ್ನು ಬಳಸಿಕೊಂಡಿದ್ದಾರೆ ಎಂದು ಚಾಟಿ ಬೀಸಿದರು.

ಎಟಿಎಂ ಸರ್ಕಾರದ ಕಲೆಕ್ಷನ್!

ರಾಜ್ಯ ಬಜೆಟ್ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಎಟಿಎಂ ಸರ್ಕಾರ(ATM Sarkara)ದ ಕಲೆಕ್ಷನ್ ಬಜೆಟ್! ಕುಟುಕಿದೆ. ಕರ್ನಾಟಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಾಲ ಮಾಡಿರುವ ಆರ್ಥಿಕ ವರ್ಷ. ಸರ್ಕಾರ ಮಾಡಿರುವ ಸಾಲ ಉತ್ಪಾದಕ ವಲಯಕ್ಕೆ ಪೂರಕವಾಗಿರದೇ, ಅನುತ್ಪಾದಕ ವಲಯಕ್ಕೆ ಮೀಸಲು. ಆದಾಯವನ್ನು ಹೆಚ್ಚಿಸಲು ಯಾವುದೇ ಉಪಕ್ರಮಗಳನ್ನು ಘೋಷಿಸದೇ, ಕೇವಲ ಸಾಲದ ಹೊರೆಯ ಹೇರಿಕೆ ಎಂದು ಛೇಡಿಸಿದೆ.

RELATED ARTICLES

Related Articles

TRENDING ARTICLES