Site icon PowerTV

ವಿಂಡೀಸ್ ವಿರುದ್ದದ ಟಿ-20 ಸರಣಿಗೆ ಭಾರತ ತಂಡ ಪ್ರಕಟ : SKYಗೆ ಉಪನಾಯಕನ ಪಟ್ಟ

ಬೆಂಗಳೂರು : ವೆಸ್ಟ್ ಇಂಡೀಸ್ ವಿರುದ್ದದ ಟಿ-20 ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.

ಟೆಸ್ಟ್ ಹಾಗೂ ಏಕದಿನ ಸರಣಿಗಳ ಬಳಿಕ ವಿಂಡೀಸ್ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.

ಟಿ-20 ಸ್ಪೆಷಲಿಸ್ಟ್ ಸೂರ್ಯ ಕುಮಾರ್ ಯಾದವ್ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ಐಪಿಎಲ್ ನಲ್ಲಿ ಮಿಂಚಿದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಟಿ-20 ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಹಿರಿಯರಿಗೆ ವಿಶ್ರಾಂತಿ

ಹಿಟ್ ಮ್ಯಾನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆಲ್ ರೌಂಡರ್ ರವೀಂದ್ರ ಜಡೇಜಾ ಸೇರಿದಂತೆ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ, ಏಕದಿನ ಹಾಗೂ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಋತುರಾಜ್​ ಗಾಯಕ್ವಾಡ್​ ಟಿ-20 ತಂಡದಲ್ಲಿ ಅವಕಾಶ ನೀಡಿಲ್ಲ.

ಇದನ್ನೂ ಓದಿ : ವೆಸ್ಟ್ ಇಂಡೀಸ್ ಸರಣಿಗೆ ಭಾರತ ತಂಡ ಪ್ರಕಟ : ರಹಾನೆಗೆ ಉಪನಾಯಕನ ಪಟ್ಟ, ಪೂಜಾರಗೆ ಕೊಕ್

ಹೀಗಿದೆ ಭಾರತ ತಂಡ

ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯ ಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯಿ, ಆರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಆವೇಶ್ ಖಾನ್, ಮುಕೇಶ್ ಕುಮಾರ್

ಟಿ-20 ವೇಳಾಪಟ್ಟಿ

ಆ.3 : ಮೊದಲ ಟಿ-20 : ಟ್ರಿನಿಡಾಡ್

ಆ.6 : 2ನೇ ಟಿ-20 : ಗಯಾನಾ

ಆ.8 : 3ನೇ ಟಿ-20 : ಗಯಾನಾ

ಆ.12 : 4ನೇ ಟಿ-20 : ಪ್ಲೋರಿಡಾ

ಆ.13 : 5ನೇ ಟಿ-20 : ಪಪ್ಲೋರಿಡಾ

Exit mobile version