Site icon PowerTV

ಬ್ರಾಹ್ಮಿ ಮುಹೂರ್ತದಲ್ಲಿ ಬಿಡುಗಡೆಯಾಯ್ತು ‘ಸಲಾರ್’ ಮೂವಿ ಟೀಸರ್

ಬೆಂಗಳೂರು : ನಟ ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಸಲಾರ್ ಸಿನಿಮಾದ ಟೀಸರ್ ಇಂದು ಅಧಿಕೃತವಾಗಿ ಬಿಡುಗಡೆಯಾಗಿದ್ದು ಇದೇ ಸೆಪ್ಟೆಂಬರ್ 28 ಕ್ಕೆ ವಿಶ್ವದಾದ್ಯಂತ ಏಕಕಾಲದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಭಾರಿ ಮಳೆ ಮುನ್ಸೂಚನೆ : ಕರಾವಳಿಯ ಜಿಲ್ಲೆಗಳಲ್ಲಿಂದು ಶಾಲೆ, ಕಾಲೇಜಿಗೆ ರಜೆ ಘೋಷಣೆ

ಇಂದು ಮುಂಜಾನೆ 5.12 ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಸಲಾರ್ ಟೀಸರ್ ಬಿಡುಗಡೆಯಾಗಿದೆ.  ಪ್ರಭಾಸ್ ಜೊತೆ ಮಲಯಾಳಂನ ಪೃಥ್ವಿರಾಜ್ ಸುಕುಮಾರನ್ ಪಾತ್ರ ಅನಾವರಣಗೊಂಡಿದ್ದು ಶ್ರುತಿ ಹಾಸನ್, ಜಗಪತಿ ಬಾಬು, ಶ್ರಿಯಾ ರೆಡ್ಡಿ, ಮಧು ಗುರುಸ್ವಾಮಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಜಿಎಫ್​ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮತ್ತು ಹೊಂಬಾಳೆ ಫಿಲಿಂಸ್​ ಬ್ಯಾನರ್​ನ ಅಡಿಯಲ್ಲಿ ನಿರ್ಮಾಣವಾಗಿರುವ ಮತ್ತೊಂದು 200 ಕೋಟಿ ಬಿಗ್ ಬಜೆಟ್ ಸಿನಿಮಾ ಇದಾಗಿದ್ದೂ ತೆಲುಗಿನ ಜೊತೆಗೆ ಕನ್ನಡ, ಹಿಂದಿ,ಮಲಯಾಳಂ ನಲ್ಲಿ ಚಿತ್ರ ತೆರೆಕಾಣಲಿದೆ.

Exit mobile version