Site icon PowerTV

ಇಂದು ಮನ್ಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ.

ಹೌದು, ಇಂದು ಮಧ್ಯಾಹ್ನ 1 ಗಂಟೆಗೆ ಮನ್ಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, 12 ನಿರ್ದೇಶಕರ ಪೈಕಿ 7 ನಿರ್ದೇಶಕರನ್ನು ಜೆಡಿಎಸ್ ಹೊಂದಿದ್ದು ಕಾಂಗ್ರೆಸ್ 3 ಹಾಗೂ ಬಿಜೆಪಿ ಇಬ್ಬರು ನಿರ್ದೇಶಕರನ್ನು ಹೊಂದಿದೆ.

ಕೆಎಂಎಫ್​ ಪ್ರತಿನಿಧಿ, ಪಶುಸಂಗೋಪನಾ ಇಲಾಖೆ ಉಪ ‌ನಿರ್ದೇಶಕ, ರಾಜ್ಯ ಸಹಕಾರ ಮಹಾಮಂಡಳದಿಂದ ಒಬ್ಬರು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು, ಸರ್ಕಾರದ ನಾಮನಿರ್ದೇಶಿತ ಓರ್ವ ಸದಸ್ಯರಿಗೆ ಮತದಾನದ ಹಕ್ಕಿದೆ.

ಇದನ್ನೂ ಓದಿ: ಸಚಿವ ಚಲುವರಾಯಸ್ವಾಮಿ ರಾಜೀನಾಮೆಗೆ ಹೆಚ್‌.ಡಿ ಕುಮಾರಸ್ವಾಮಿ ಆಗ್ರಹ 

ಇಂದು ನಡೆಯುತ್ತಿರುವ ಮನ್ಮುಲ್ ಅಧ್ಯಕ್ಷರ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ ‘ಇಂದು ಚುನಾವಣೆ ನಡೆಯುತ್ತಿದೆ, ಇಲ್ಲಿ ಮೊದಲಿಂದಲೂ ಹಗರಣಗಳು ಹೆಚ್ಚಾಗಿದೆ. ಅದರ ಬಗ್ಗೆ ತನಿಖೆ ಮಾಡುವಂತೆ ರೈತರು ಮನವಿ ಮಾಡಿದ್ದಾರೆ. ಹಾಗಾಗಿ ಚುನಾವಣೆ ಪಾಡಿಗೆ ಚುನಾವಣೆ ನಡೆಯುತ್ತೆ, ತನಿಖೆ ಪಾಡಿಗೆ ತನಿಖೆ ಕೂಡಾ ನಡೆಯುತ್ತೆ.

ಬಿಜೆಪಿ-ಜೆಡಿಎಸ್ ಇಬ್ರೂ ಹೊಂದಾದ್ರೂ ಯಾವುದೇ ತೊಂದರೆ ಇಲ್ಲ, ನೋಡೊಣ’ ಎಂದು ತಿಳಿಸಿದರು.

 

Exit mobile version